ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಾದ್ಯಂತ 2024ರ ಒಂದು ವರ್ಷದ ಅವಧಿಯಲ್ಲಿ ದಾಖಲಾಗಿದ್ದ 612 ವಿವಿಧ ರೀತಿಯ ವಸ್ತು ಕಳ್ಳತನ ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸರು 298 ಪ್ರಕರಣಗಳನ್ನು ಬೇಧಿಸಿ, ಅವರುಗಳ ಮಾಲೀಕರಿಗೆ ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತಂತೆ ಡಿಎಆರ್ ಮೈದಾನದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮಾಹಿತಿ ನೀಡಿ, ನಂತರ ಮಾಲೀಕರಿಗೆ ಆಯಾ ವಸ್ತುಗಳನ್ನು ಮರಳಿ ಹಸ್ತಾಂತರಿಸಿದರು.
Also Read>> ಉತ್ತರ ಕನ್ನಡ | ಪದ್ಮಶ್ರೀ ಪುರಸ್ಕೃತ ಎನ್ಸೈಕ್ಲೋಪೀಡಿಯಾ ಆಫ್ ದಿ ಫಾರೆಸ್ಟ್ ‘ತುಳಸಿಗೌಡ’ ವಿಧಿವಶ
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 2024ರ ಜನವರಿ 16ರಿಂದ ಡಿಸೆಂಬರ್ 16ರವರೆಗೂ ಜಿಲ್ಲೆಯಾದ್ಯಂತ 612 ವಿವಿಧ ಕಳುವು ಪ್ರಕರಣಗಳು ದಾಖಲಾಗಿದ್ದು, 298 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಅವಧಿಯಲ್ಲಿ 3,76,99,299 ಹಣ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
3,22, 37,654 ಮೌಲ್ಯಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು, ಜಾನುವಾರು, ಅಡಿಕೆ, ಬಂಗಾರ, ಬೆಳ್ಳಿ, ಮೊಬೈಲ್ ಫೋನ್, ವಾಹನಗಳು ಮೊದಲಾದ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ಇನ್ನು, ಹಿಂದಿನ ವರ್ಷದ 54 ಪ್ರಕರಣಗಳು ಈ ವರ್ಷ ಪತ್ತೆಯಾಗಿದ್ದು, ಇದರಲ್ಲಿ 26 ಮನೆ ಕಳ್ಳತನ, 11 ಸಾಮಾನ್ಯಕಳವು, 17 ವಾಹನ ಸೇರಿದಂತೆ 54 ಪ್ರಕರಣಗಳು ಪತ್ತೆಯಾಗಿದೆ ಇವುಗಳು ಸೇರಿ 298 ಪ್ರಕರಣಗಳ ಪತ್ತೆಯಾಗಿದೆ.
ಪತ್ತೆಯಾದ ವಿವಿಧ ರೀತಿಯ ವಸ್ತುಗಳನ್ನು ಅವುಗಳ ಮಾಲೀಕರಿಗೆ ಎಸ್’ಪಿ ಅವರು ಮರಳಿ ಹಸ್ತಾಂತರ ಮಾಡಿದ್ದಾರೆ. ಅಲ್ಲದೇ, ಈ ಎಲ್ಲಾ ಪತ್ತೆಯ ತನಿಖಾ ಕಾರ್ಯದಲ್ಲಿ ಶ್ರಮಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅವರು ಅಭಿನಂದಿಸಿದ್ದಾರೆ.
ಯಾವೆಲ್ಲಾ ಪ್ರಕರಣಗಳ ಪತ್ತೆ?
- ಇಸಿಐಆರ್ ಪೋರ್ಟಲ್’ನಲ್ಲಿ ಪತ್ತೆಯಾದ ಮೊಬೈಲ್- 477
- ಕೊಲೆ ಪ್ರಕರಣ – 2
- ದರೋಡೆ – 3
- ಸುಲಿಗೆ – 19
- ಸರಗಳ್ಳತನ -4
- ಕನ್ನಕಳುವು -51
- ಮನೆ ಕಳುವು – 14
- ಸಾಮಾನ್ಯ ಕಳುವು – 62
- ಜಾನುವಾರು ಕಳುವು – 6
- ವಾಹನ ಕಳುವು – 70
- ವಂಚನ ಪ್ರಕರಣ – 13
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post