ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ವಿವಾಹಿತ ಮಹಿಳೆಯೊಬ್ಬರ ಅಕ್ರಮ ಪ್ರೀತಿ ಇಬ್ಬರ ಪ್ರಾಣ ಬಲಿ ಪಡೆದಿರುವ ಪ್ರೇಮ ಪ್ರಕರಣ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.
ವಿವಾಹವಾಗಿದ್ದರೂ ಗೃಹಿಣಿಯೊಬ್ಬಳು ತನ್ನ ಪ್ರಿಯಕರನಿಗಾಗಿ ಆತ್ಮಹತ್ಯೆಗೆ #Suicide ಶರಣಾಗಿದ್ದು, ಈ ವಿಷಯ ತಿಳಿದು ಅತ್ತ ಪ್ರಿಯಕರನೂ ಸಹ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮೃತ ಗೃಹಿಣಿಯನ್ನು ಸೃಷ್ಠಿ(20) ಹಾಗೂ ಆಕೆಯ ಪ್ರಿಯತಮನನ್ನು ಪ್ರಸನ್ನ(25) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಠಿ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರಸನ್ನ ಸೃಷ್ಠಿ ಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ ಅಂತಿಮವಾಗಿ ಪ್ರಸನ್ನ ಮತ್ತು ಸ್ಪಂದನಾ ಮದುವೆಯಾದರೆ ಒಂದೂವರೆ ವರ್ಷದ ಹಿಂದೆ ದಿನೇಶ್ ಜೊತೆ ಸೃಷ್ಠಿಯ ಮದುವೆ ನಡೆದಿತ್ತು.
ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಸೃಷ್ಠಿ ನಡುವೆ ಪ್ರೀತಿ ಮುಂದುವರೆದಿತ್ತಿತ್ತು. ಈ ವಿಚಾರಕ್ಕೆ ಸೃಷ್ಠಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ.
ಇದರ ನಡುವೆಯೇ ಡಿ.11 ರಂದು ಪತಿ ಮನೆಯಿಂದ ಸೃಷ್ಠಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್ ಅವರು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಡಿ.16 ರಂದು ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಈ ಶವ ಯಾರದ್ದೂ ಎಂದು ಪರಿಶೀಲಿಸಿದಾಗ ನಾಪತ್ತೆಯಾದ ಸೃಷ್ಠಿಯದ್ದೇ ಎನ್ನುವುದು ದೃಢಪಟ್ಟಿತ್ತು.
ಸೃಷ್ಠಿಯ ಆತ್ಮಹತ್ಯೆ ವಿಚಾರ ತಿಳಿದು ದುಃಖಕ್ಕೀಡಾಗಿದ್ದ ಪ್ರಸನ್ನ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post