ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿ ಹಂತದಲ್ಲಿಯೇ ತಾವು ತಲುಪಬೇಕಾದ ಗುರಿಯ ಬಗ್ಗೆ ಸ್ಪಷ್ಟತೆ ಪಡೆಯಿರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ #NES ಕಾರ್ಯದರ್ಶಿ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವತಿಯಿಂದ ಶನಿವಾರ ಕುವೆಂಪು ರಂಗಮಂದಿರಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Also read: ಬಿಜೆಪಿ ವಿಧಾನಪರಿಷತ್ ಶಾಸಕರ ಹಕ್ಕುಚ್ಯುತಿ ಹಿನ್ನೆಲೆ: ಸೂಕ್ತ ಕ್ರಮಕ್ಕೆ ಆಗ್ರಹ
ಹಾಗೆಯೇ ವಿದ್ಯಾಭ್ಯಾಸವು #Education ಕೂಡ ಶ್ರದ್ಧೆಯಿಂದ ಕಲಿತಾಗ ಮಾತ್ರ ಪರಿಪೂರ್ಣತೆಯ ಶಕ್ತಿ ದೊರೆಯಲಿದೆ. ಶಿಕ್ಷಕರ ಜವಾಬ್ದಾರಿಯಷ್ಟೆ ಪೋಷಕರ ಜವಾಬ್ದಾರಿಯಿದೆ. ಟಿವಿಗಳ ಮೂಲಕ ನಾವು ನೋಡುವ ರಿಯಾಲಿಟಿ ಶೋಗಳಾಗಲಿ, ಇತರೆ ಕಾರ್ಯಕ್ರಮಗಳಾಗಲಿ ಯಾವುದನ್ನು ಬದುಕಿನಲ್ಲಿ ಸ್ವೀಕರಿಸಬೇಕು ಎನ್ನುವ ಸೂಕ್ಷ್ಮ ಅಂಶಗಳನ್ನು ಮನೆಯಿಂದಲೆ ಕಲಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ತಿಪ್ಪೇಸ್ವಾಮಿ.ಸಿ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಬಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ವೆಂಕಟೇಶ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಮದೀಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post