ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿ ಬಗರ್ ಹುಕುಂ ಸಾಗುವಳಿ ಜಮೀನು ಸ್ವಾದೀನ ಮಾಡಿಕೊಳ್ಳದಂತೆ ಆಗ್ರಹಿಸಿ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಕರುನಾಡು ಸಂರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಲಾಯಿತು.
ಸೋಗಾನೆ ಗ್ರಾಮದ ಸರ್ವೇ ನಂಬರ್ 156ರಲ್ಲಿ ಜಮೀನು ಸ್ವಾದೀನಕ್ಕೆ ನಗರಾಭಿವೃದ್ದಿ ಪ್ರಾಧಿಕಾರವು ಕ್ರಮಕೈಗೊಂಡಿದೆ. ಸದರಿ ಸರ್ವೇ ನಂಬರ್ ನಲ್ಲಿ ಸುಮಾರು 40 ರೈತ ಕುಟುಂಬಗಳು ತಲತಲಾಂತರದಿಂದ ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿವೆ ಎಂದು ಸಂಘಟನೆ ತಿಳಿಸಿದೆ.
ಬಹುತೇಕ ಸಾಗುವಳಿದಾರರು ಪರಿಶಿಷ್ಟ ಜಾತಿ ಪಂಗಡದವರಾಗಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದುಕೊಂಡು ಬರುತ್ತಿದ್ದಾರೆ. ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡುವಂತೆ ಕೋರಿ, ರೈತರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ಸಂಘಟನೆ ತಿಳಿಸಿದೆ.
Also read: ಶ್ರುತಿ ಅವರಿಗೆ ದ್ರಾವಿಡ ಮಹಾ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ಪ್ರದಾನ
ಈ ಹಿಂದೆ ಸದರಿ ಜಮೀನುಗಳಲ್ಲಿ ಗೋಡೌನ್ ನಿರ್ಮಾಣಕ್ಕೆ ಎಫ್ ಸಿ ಐ ಮುಂದಾಗಿದ್ದ ವೇಳೆ, ನ್ಯಾಯಾಲಯ ಪ್ರಕರಣದ ಕಾರಣದಿಂದ ನಿರ್ಧಾರ ಕೈಬಿಟ್ಟಿತ್ತು. ಹಾಗೆಯೇ ಹಕ್ಕಿಪಿಕ್ಕಿ ಸಮುದಾಯದವರಿಗೆ ನಿವೇಶನ ವಿತರಣೆ ಮಾಡುವ ಕ್ರಮವನ್ನು ಅಧಿಕಾರಿಗಳು ಕೈಬಿಟ್ಟಿದ್ದರು ಎಂದು ಸಂಘಟನೆ ತಿಳಿಸಿದೆ.
ಇದೀಗ ನಗರಾಭಿವೃದ್ದಿ ಪ್ರಾಧಿಕಾರವು ಸದರಿ ಸರ್ವೇ ನಂಬರ್ ಜಮೀನು ಸ್ವಾದೀನ ಉದ್ದೇಶದಿಂದ ಸರ್ವೆ ಕಾರ್ಯ ಆರಂಭಕ್ಕೆ ಮುಂದಾಗಿರುವ ಮಾಹಿತಿ ಸರಿಯಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಭೂ ಸ್ವಾದೀನಕ್ಕೆ ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ ಎಸ್ ಪಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post