ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪಠ್ಯೇತರ ಚಟುವಟಿಕೆಗಳಿಂದ #Extra Curricular Activity ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೆÊರ್ಯ ಬೆಳೆಯುವ ಜೊತೆಯಲ್ಲಿ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಕಿರಣ್ ಕುಮಾರ್ ಹೇಳಿದರು.
ಕುಮದ್ವತಿ ಪಿಯು ಕಾಲೇಜಿನ ವಾರ್ಷಿಕ ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಒತ್ತಡದ ಮನೋಭಾವನೆ #Stressful attitude ಹೆಚ್ಚುತ್ತಿದೆ. ಇದರಿಂದ ಈಚೆ ಬರಲು ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿಜ್ಞಾನ ಸಮ್ಮೇಳನ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದರು.
ಇಂದಿನ ಯುಗದಲ್ಲಿ ಭಾರತದಂತಹ ದೇಶ ಕೃಷಿ ಪ್ರಧಾನವಗಿದ್ದು ವಿದ್ಯಾವಂತರು ಕೂಡ ಕೃಷಿಯ ಕಡೆಗೆ ತಿರುಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವ ತಂತ್ರಜ್ಞಾನವನ್ನು ಇಂದಿನ ಪೀಳಿಗೆ ಗಮನಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಪಡೆಯುವುದರ ಮುಖಾಂತರ ಕೃಷಿ ಚಟುವಟಿಕೆಗಳು ಇನ್ನಿತರ ಕ್ಷೇತ್ರಗಳ ಕಡೆಗೂ ಕೂಡ ಗಮನಹರಿಸಬೇಕು ಎಂದು ಕರೆ ನೀಡಿದರು.
Also read: ಉರುಳಿಬಿದ್ದ ಕಂಟೇನರ್ | ಕಾರು ಅಪ್ಪಚ್ಚಿ | 6 ಮಂದಿ ದಾರುಣ ಸಾವು | ಘಟನೆ ಹೇಗಾಯಿತು?
ಡಾ. ಶಿವಕುಮಾರ್ ನಾವು ಮಾಡುವ ಕೆಲಸ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ದೊರೆಯುತ್ತದೆ. ಯಾವುದೇ ಗುರಿಯ ಕಡೆಗೆ ಫೋಕಸ್ ಮಾಡಬೇಕು. ಏಕೆಂದರೆ ಮೊನ್ನೆ ಗುಕೇಶ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿ ಕೇವಲ 18 ವರ್ಷದಲ್ಲಿ 20 ಕೋಟಿ ಅಧಿಕ ಹಣವನ್ನು ಸಂಪಾದಿಸುತ್ತಾನೆ. ಕೆಲವೇ ದಿನಗಳ ಹಿಂದೆ ಆತ ಯಾರು ಎಂದು ತಿಳಿದಿರುವುದಿಲ್ಲ. ಆದರೆ ಇಂದು ಆತನನ್ನು ವಿಶ್ವವೇ ಗುರುತಿಸುತ್ತಿದೆ ಎಂದರು.
ಆತ ಎಂಟನೇ ತರಗತಿಯಲ್ಲಿ ಇದ್ದಾಗ ಒಂದು ಸಂದರ್ಶನದಲ್ಲಿ ಅವನಿಗೆ ಕೇಳುತ್ತಾರೆ. ಭವಿಷ್ಯದಲ್ಲಿ ನಿನ್ನ ಗುರಿಯನ್ನು ಎಂದು ವಿಶ್ವ ಚಾಂಪಿಯನ್ ಚೆಸ್ ಪಟುವಾಗುತ್ತೇನೆ ಎಂದು ಹೇಳಿದ ಅದೇ ಬಾಲಕ ಇಂದು ವಿಶ್ವದೆದುರಿಗೆ ಸಾಧಿಸಿ ನಿಂತಿದ್ದಾನೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಗುರಿ ಏನು ಎಂಬುದನ್ನು ನೀವೇ ನಿರ್ಧರಿಸಿ ಬೇರೆಯವರು ನೀವು ಏನಾಗಬೇಕೆಂದು ನಿರ್ಧರಿಸಬಾರದು ಎಂದರು.
ಪೋಷಕರು ಅಕ್ಕಪಕ್ಕದ ಮನೆಯಲ್ಲಿ ಡಾಕ್ಟರ್, ಇಂಜಿನಿಯರ್ ಇದ್ದಾರೆ ಎಂದು ಮಕ್ಕಳನ್ನು ಅವರಿಗೆ ಹೋಲಿಕೆ ಮಾಡಬಾರದು ಎಂದು ಹೇಳಿದರು.
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಎಕ್ಸಲೆನ್ಸ್ ಅವಾರ್ಡ್ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯರಾದ ವೀರೇಂದ್ರ ಅವರು, ನಮ್ಮ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಆದ್ಯತೆ ನೀಡಲಾಗುತ್ತದೆ. ರಾಜ್ಯ ಮಟ್ಟದ ಕ್ರೀಡಾಪಟುಗಳನ್ನು ಈ ಕಾಲೇಜಿನಲ್ಲಿ ಸನ್ಮಾನಿಸಿದ್ದೇವೆ ಎಂದರು.
ಕಳೆದ ಸಾಲಿನಲ್ಲಿ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ರಾಂಕ್, ವಿಜ್ಞಾನ ವಿಭಾಗದಲ್ಲಿ ಒಂಭತ್ತನೇ ರಾಂಕ್ ಕೂಡ ಬಂದಿದೆ ಎಂದು ತಿಳಿಸಿದರು.
ಮುಖ್ಯಸ್ಥರಾದ ವಿಶ್ವನಾಥ್, ಸಿದ್ದೇಶ್ವರ ಉಪಸ್ಥಿತರಿದ್ದರು. ಯೋಗರಾಜ್ ನಿರೂಪಿಸಿ, ಚಂದ್ರಶೇಖರ್ ಸ್ವಾಗತಿಸಿದರು. ಜಿ.ಕೆ. ಚೈತ್ರ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post