ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ #LakshmiHebbalkar ವಿರುದ್ಧ ಶಾಸಕ ಸಿ.ಟಿ. ರವಿ #CTRavi ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ವಿವಾದದಲ್ಲಿ ಸ್ವತಃ ಲಕ್ಷ್ಮೀ ಅವರು ಇಂದು ವೀಡಿಯೋ ಹಾಗೂ ಆಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಹೆಬ್ಬಾಳ್ಕರ್ ಅವರು ದಾಖಲೆ ಬಿಡುಗಡೆ ಮಾಡಿ ಬಿಜೆಪಿ ಹಾಗೂ ರವಿ ಅವರಿಗೆ ಸವಾಲು ಹಾಕಿದ್ದಾರೆ.
ಸಿ.ಟಿ. ರವಿ ನನ್ನ ವಿರುದ್ದ ಅಶ್ಲೀಲ ಪದ ಬಳಕೆ ಮಾಡಿರುವುದಕ್ಕೆ ನನ್ನ ಬಳಿ ಸಾಕ್ಷಿಯಿದೆ ಎಂದು ಅದನ್ನು ಬಿಡುಗಡೆ ಮಾಡಿದರು.ರವಿ ವಿರುದ್ಧ ಕ್ರಮ ಆಗುವವರೆಗೂ ನಾನು ಯಾವುದೇ ಕಾರಣಕ್ಕೂ ವಿರಮಿಸುವ ಪ್ರಶ್ನೆಯೇ ಇಲ್ಲ. ಪ್ರತಿನಿತ್ಯ ರಾಮ ರಾಮ ಎನ್ನುವ ಬಿಜೆಪಿ ಇಂದು ರವಿ ಪರವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.
ಬಿಜೆಪಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಪಕ್ಷ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅವರದ್ದೇ ಪಕ್ಷದ ನಾಯಕನಿಂದ ನನಗೆ ಅನ್ಯಾಯವಾಗಿದೆ. ಈಗ ಅದೇ ಪಕ್ಷ ರವಿ ಪರವಾಗಿ ನಿಂತಿದೆ ಎಂದು ಕಿಡಿ ಕಾರಿದ್ದಾರೆ.
Also Read>> ಬೆಂಗಳೂರು | ಶ್ರೀನಿವಾಸನ ಸನ್ನಿಧಿಯಲ್ಲಿ ಅಹಿಕಾ ಗಾಯನ ಸೇವೆ ಸಂಪನ್ನ
ನಾನು ನನಗೆ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಪಡೆಯಲು ಕಾನೂನು ಹೋರಾಟ ಮಾಡುವ ಜೊತೆಯಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರ ಬಳಿಯೇ ನ್ಯಾಯ ಕೇಳುತ್ತೇನೆ. ಪ್ರಧಾನಿ ಹಾಗೂ ರಾಷ್ಟ್ರಪತಿ ಅವರುಗಳನ್ನು ಭೇಟಿಯಾಗಿ, ವೀಡಿಯೋ ತೋರಿಸಿ ಅವರ ಬಳಿಯೇ ನ್ಯಾಯ ಕೇಳುತ್ತೇನೆ ಎಂದರು.
ಸಿ.ಟಿ. ರವಿ ಅವರ ತಾಯಿ, ಪತ್ನಿ ಅವರುಗಳು ಹೆಣ್ಣಾಗಿ ನ್ಯಾಯ ಹೇಳಬೇಕು. ನನ್ನ ವಿರುದ್ಧ ರವಿ ಬಳಸಿರುವ ಪದ ಸರಿಯಾಗಿದೆಯೇ ಎಂದು ಅವರ ಬಳಿಯೂ ನ್ಯಾಯ ಕೇಳುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post