ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2024 ಕಳೆದ 2025ರ ಇಂಗ್ಲೀಷ್ #NewYear2025 ಕ್ಯಾಲೆಂಡರ್ ವರ್ಷ ಆರಂಭವಾಗಿದ್ದು, ಇದರ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆದಿದೆ.
ಹೊಸ ವರ್ಷದ ಸಂಭ್ರಮಾಚರಣೆ ರಾಜ್ಯದಲ್ಲಿ ಅದ್ದೂರಿಯಾಗಿ ನಡೆದಿದ್ದು, ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಬಂದಿದೆ.
ನಿನ್ನೆ ಒಂದೇ ದಿನ ಕೆಎಸ್’ಬಿಸಿಎಲ್’ನಿಂದ ಹೊಸ ವರ್ಷಾಚರಣೆಗೆ ಬರೋಬ್ಬರಿ 308 ಕೋಟಿ ರೂ. ಮೊತ್ತದ ಮದ್ಯ #Alcohol ಮಾರಾಟದ ಮೂಲಕ ದಾಖಲೆ ಬರೆದಿದೆ.
Also Read>> ಮ್ಯಾಕ್ಸ್ ಸಿನಿಮಾ ಟೈಟಲ್’ನಲ್ಲಿ ಮಿಸ್ಟೇಕ್ | ಸ್ವತಃ ಕಿಚ್ಚ ಸುದೀಪ್ ನೀಡಿದ ಸ್ಪಷ್ಟನೆಯೇನು?
ಹೊಸ ವರ್ಷಾಚರಣೆಗೆ ಅಬಕಾರಿ ಇಲಾಖೆ 250 ಕೋಟಿ ರೂ. ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು. ಆದರೆ, ಡಿ.31ರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಎಸ್’ಬಿಸಿಎಲ್ ವತಿಯಿಂದ ಬರೋಬ್ಬರಿ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಡಿ.27ರ ಶುಕ್ರವಾರದಂದು ಬರೋಬ್ಬರಿ 408.58 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.
ಐಎಂಎಲ್- 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327.50 ಕೋಟಿ ರೂ. ಆದಾಯ ಬಂದಿತ್ತು. ಬಿಯರ್- 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80.58 ಕೋಟಿ ರೂ. ಆದಾಯ ಬಂದಿತ್ತು.
ಐಎಂಎಲ್, ಬಿಯರ್ #Beer ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರೂ. ಆದಾಯವಾಗಿತ್ತು.
ಯಾವುದರಿಂದ ಎಷ್ಟು ಆದಾಯ ಬಂದಿದೆ?
- ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ
- ಬಿಯರ್ 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ
- ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















