ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಮ್ಯಾಕ್ಸ್ ಚಿತ್ರದ #MaxMovie ಟೈಟಲ್ ಕಾರ್ಡ್’ನಲ್ಲಿ ಅಕ್ಷರ ಲೋಪವಾದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಕಿಚ್ಚ ಸುದೀಪ್ #KicchaSudeep ಅವರೇ ಸ್ಪಷ್ಟನೆ ನೀಡಿದ್ದಾರೆ.
Also Read>> ಕೈಯಲ್ಲಿ ಡೆತ್ ನೋಟ್ ಹಿಡಿದು ಸಾಬೂನು ನಿಗಮದ ಅಧಿಕಾರಿ ಆತ್ಮಹತ್ಯೆ
ಈ ಕುರಿತಂತೆ ಮಾತನಾಡಿರುವ ಸುದೀಪ್, ಇದು ಸಣ್ಣದೊಂದು ತಪ್ಪು. ಚಿತ್ರದ ಯಶಸ್ಸು ಮುಖ್ಯ ಎಂದಿದ್ದಾರೆ.
ಈ ವಿಚಾರದಲ್ಲಿ ಚಿತ್ರದ ನಿರ್ದೇಶಕರು ಕನ್ನಡದವರಲ್ಲದ ಕಾರಣ ಅವರಿಗೆ ಗೊತ್ತಾಗಿಲ್ಲ. ಮೊದಲು ತಪ್ಪಾಗಿರುವ ಟೈಟಲ್ ಕಾರ್ಡ್ ನೋಡಿದ್ದೀರಿ. ನಂತರ ಸಿನಿಮಾ ನೋಡಿದ್ದೀರಿ. ಚಿತ್ರದ ಮುಂದೆ ಅದು ಸಣ್ಣದು. ತುಂಬಾ ಕೊರತೆ ಇರುವ ನನ್ನನ್ನೇ ನನ್ನ ತಾಯಿ ಕ್ಷಮಿಸಿ ಬೆಳೆಸಿದ್ದಾರೆ. ಕ್ಷಮೆ ಅನ್ನೋದು ತಾಯಿಯ ಗುಣ ಎಂದು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕೇಳಿದ ಕ್ಷಮೆಗೆ ಈ ರೀತಿಯಾಗಿ ಉತ್ತರಿಸಿದರು.
ಇದರ ಜೊತೆಗೆ ಒಂದಿಷ್ಟು ವಿವಾದ ಸಹ ನಡೆದಿದೆ. ಕೇಕ್ ಮೇಲೆ ಬಾಸಿಸಂ ಎಂದು ಬರೆದಿದ್ದು ಒಂದು ಕಡೆ ವಿವಾದ ಮಾಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post