ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ಪಾಲಿಕೆಯಲ್ಲಿ ನಡೆಯುವ ಈ ಭಾರಿ ಬಜೆಟ್’ನಲ್ಲಿ ಶಿವಮೊಗ್ಗ ನಗರದಲ್ಲಿರುವ ಸ್ಮಶಾನಗಳ #Graveyard ಅಭಿವೃದ್ಧಿಗೆ ಹಣ ಮೀಸಲಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿರುವ ಹಲವಾರು ಸ್ಮಶಾನಗಳಿಗೆ ಕಾಲಿಟ್ಟರೆ ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಮುಳ್ಳುಚುಚ್ಚುವ ಆತಂಕ, ಮಳೆ ಬಂದರೆ ಅಂತ್ಯಸಂಸ್ಕಾರಕ್ಕೂ ಸರಿಯಾದ ಜಾಗವಿಲ್ಲದೇ ಸೋರಗಿ ಹೋಗಿವೆ ಎಂದರೆ ತಪ್ಪಗಲಾರದು.
Also read: ಶಿವಮೊಗ್ಗ | ಧೂಳು ಹಿಡಿಯುತ್ತಿದ್ದ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್

ಅಧಿಕಾರಿಗಳ ನಿರಾಸಕ್ತಿ
ಶಿವಮೊಗ್ಗ ನಗರದಲ್ಲಿರುವ ಸ್ಮಶಾನ ಭೂಮಿ ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಅಧಿಕಾರಿಗಳ ನಿರುತ್ಸಾಹದಿಂದ ಪಾಳು ಕೊಂಪೆಗಳಾಗಿ ಮಾರ್ಪಟ್ಟಿವೆ. ಎಲ್ಲೆಂದರಲ್ಲಿ ಗಿಡಗಳು, ತ್ಯಾಜ್ಯಕಂಡು ಬರುತ್ತದೆ. ಅಧಿಕಾರಿಗಳ ಸ್ಮಶಾನಗಳ ಅಭಿವೃದ್ಧಿಯನ್ನು ಮರೆತ್ತಿದ್ದಾರೆ ಎಂಬುದು ಸಾರ್ವಜನಿಕರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post