ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೈಕುಂಠ ಏಕಾದಶಿ #Vaikunta Ekadashi ಅಂಗವಾಗಿ ಮಲ್ಲೇಶ್ವರಂ ಸುಧೀಂದ್ರ ನಗರ ಈಜುಕೊಳದ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಜ.10ರಂದು ಅಖಂಡ ಭಾಗವತ ಪ್ರವಚನವನ್ನು ಏರ್ಪಡಿಸಲಾಗಿದೆ.
ಶುಕ್ರವಾರ ಬೆಳಗ್ಗೆ 7.30ರಿಂದ ರಾತ್ರಿ 12 ಗಂಟೆಯವರೆಗೂ ಅಖಂಡ ಭಾಗವತ ಪ್ರವಚನ ನಡೆಯಲಿದ್ದು, ಹಲವು ಆಚಾರ್ಯರು ಇದನ್ನು ನಡೆಸಿಕೊಡಲಿದ್ದಾರೆ.
Also read: ತಿರುಪತಿ ಕಾಲ್ತುಳಿತ | ಕರ್ನಾಟಕದ ಓರ್ವ ಮಹಿಳೆ ಸಾವು | ಪರಿಸ್ಥಿತಿ ಹೇಗಿದೆ?
ಶ್ರೀ ಚಂದ್ರಶೇಖರ ಆಚಾರ್ಯ (ಪ್ರಥಮ ಸ್ಕಂದ), ಶ್ರೀ ದ್ವೆÊಪಾಯನಾಚಾರ್ಯ ಜೋಷಿ (ದ್ವಿತೀಯ ಸ್ಕಂದ), ಶ್ರೀ ದಂಬಳ ಜಯಸಿಂಹಾಚಾರ್ಯ (ತೃತೀಯ ಸ್ಕಂದ), ಶ್ರೀ ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ (ಚತುರ್ಥ ಸ್ಕಂದ), ಶ್ರೀ ಪ್ರಶಾಂತ ಭಾರ್ಗವಾಚಾರ್ಯ (ಪಂಚಮ ಸ್ಕಂದ), ಶ್ರೀ ರಾಮವಿಠಲಾಚಾರ್ಯ (ಷಷ್ಟಮ ಸ್ಕಂದ), ಶ್ರೀ ಬ್ರಹ್ಮಣ್ಯಾಚಾರ್ಯ (ಸಪ್ತಮ ಸ್ಕಂದ), ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ (ಅಷ್ಟಮ ಸ್ಕಂದ), ಶ್ರೀ ಆನಂದತೀರ್ಥಾಚಾರ್ಯ ಮಾಳಗಿ (ನವಮ ಸ್ಕಂದ), ಶ್ರೀ ಶ್ರೀನಿಧಿ ಆಚಾರ್ಯ (ದಶಮ ಸ್ಕಂದ) ಮತ್ತು ಶ್ರೀ ರಾಘವಾಚಾರ್ಯ ಮಿಟ್ಟಿ (ಏಕಾದಶ ಸ್ಕಂದ) ಅವರುಗಳು ಪ್ರವಚನ ನಡೆಸಿಕೊಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post