ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #S N Channabasappa ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ, ಚಾಮರಾಜನಗರ ದಲ್ಲಿ ನಡೆದ ಗೋವುಗಳ ಕೆಚ್ಚಲು ಕೊಯ್ದ ಘಟನೆ #Cow udder cut off incident ಅತ್ಯಂತ ಖಂಡನೀಯವಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಹ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋವುಗಳ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆದರೆ ಪ್ರಸ್ತುತ ರಾಜ್ಯದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಗೋವುಗಳ ಕೆಚ್ಚಲನ್ನ ಕೊಯ್ಯುವಂತಹ ನೀಚ ಕೃತಕ್ಕೆ ಇಳಿದಿರುವುದು ಅತ್ಯಂತ ನೋವಿನ ಸಂಗತಿ. ಮುಕ್ಕೋಟಿ ದೇವತೆಗಳು ವಾಸಿಸುವಂತಹ ಗೋಮಾತೆಗೆ ಇಂತಹ ಸ್ಥಿತಿಯನ್ನು ತೊಂದರೆ ಇರುವ ಅವರ ಮಾನಸಿಕತೆ ಎಂತಹದು ಎನ್ನುವುದು ಗೊತ್ತಾಗುತ್ತದೆ ಎಂದರು.
Also read: ಗುಣಮಟ್ಟದ ಬಿತ್ತನೆ ಬೀಜ ಪರೀಕ್ಷೆ ಮಾಡುವುದು ಹೇಗೆ? ಡಾ. ಪ್ರಿಯಾ ವಿವರಿಸಿದ್ದಾರೆ ಓದಿ
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಆದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಕಾರವಾಗಿ ಪ್ರಶ್ನಿಸಿದ ಅವರು, ಇಲಾಖೆಯ ಭಯವೇ ಇಲ್ಲದಂತಾಗಿದೆ. ಅದರ ಪರಿಣಾಮವೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾನು ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದವರು ಮುಖ್ಯಮಂತ್ರಿಯಾದ ಪರಿಣಾಮ ಇವತ್ತು ಗೋವುಗಳಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
70 ಗೋ ಶಾಲೆಗಳನ್ನು ತೆರೆಬೇಕೆಂದು ಬಜೆಟ್ ನಲ್ಲಿ ಮಂಜೂರಾತಿಯನ್ನು ನೀಡಲಾಗಿದೆ. ಆದರೆ ಇದುವರೆಗೂ ಗೋಶಾಲೆಯನ್ನು ತೆರೆಯುವಂತಹ ಕಾರ್ಯಕ್ಕೆ ಮುಂದಾಗಿಲ್ಲ. ಗೋಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರ್ವ ಜನಾಂಗದವರು ವಾಸಿಸುವಂತಹ ರಾಷ್ಟ್ರ ನಮ್ಮದು ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರವನ್ನು ಬಿಟ್ಟುಕೊಟ್ಟಿದ್ದೇವೆ. ಅವರ ಪಾಡಿಗೆ ಅವರು ಬದುಕು ನಡೆಸುವುದಕ್ಕೆ ನಮ್ಮ ರಾಷ್ಟ್ರದಲ್ಲಿ ಅವಕಾಶವಿದೆ. ಆದರೆ ಇಂತಹ ಹೇಯ ಕೃತ್ಯವನ್ನು ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಸಾಹಿತಿ ಭಗವಾನ್ ರವರು ಹಿಂದುಗಳ ಕುರಿತು ಆಡಿರುವ ಮಾತು ಮಾತಿಗೆ ಪ್ರತಿಕ್ರಿಯಿಸಿದ ಅವರು, ಭಗವಾನಂದ ಹೆಸರಿಟ್ಟುಕೊಂಡಿರುವ ಆತ ಹಿಂದೂ ರಾಷ್ಟ್ರದಲ್ಲಿ ವಾಸಿಸಲು ಯೋಗ್ಯನಲ್ಲ ನೇಣು ಹಾಕಿಕೊಂಡು ಸಾಯುವುದು ಒಳ್ಳೆಯದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೂಡ ಮಾಜಿ ಅಧ್ಯಕ್ಷ ನಾಗರಾಜ್ ಬಿಜೆಪಿ ನಗರದ ಅಧ್ಯಕ್ಷ ಮೋಹನ್ ರೆಡ್ಡಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post