ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜ.26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್’ಗೆ #Republic Day Parade ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಸಾವಿತ್ರಿ ಭಟ್ ಆಯ್ಕೆಯಾಗಿದ್ದಾರೆ.
ರಾಜಾಜಿನಗರದ ಪ್ರತಿಷ್ಠಿತ ಶ್ರೀವಾಣಿ ವಿದ್ಯಾಕೇಂದ್ರದಲ್ಲಿ 9ನೇ ತರಗತಿ ಓದುತ್ತಿರುವ ಎನ್’ಸಿಸಿ ಸಾರ್ಜೆಂಟ್ ಅನ್ವಿತಾ ಸಾವಿತ್ರಿ ಭಟ್ ತನ್ನ ಪ್ರತಿಭೆಯಿಂದ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಕಳೆದ ಸಪ್ಟೆಂಬರಿನಿಂದ ನಾಲ್ಕು ತಿಂಗಳುಗಳ ಕಾಲ ನಡೆದ 7 ಹಂತದ ಕಠಿಣ ಆಯ್ಕೆ ಶಿಬಿರಗಳಲ್ಲಿ ಸಾಂಸ್ಕೃತಿಕ (ಮ್ಯಾಂಡೋಲಿನ್ ವಾದನ ಮತ್ತು ಗಾಯನ) ವಿಭಾಗದಲ್ಲಿ ಆಯ್ಕೆಗೊಂಡು, ಪ್ರಸ್ತುತ ಡಿಸೆಂಬರ್ 28ರಿಂದ ಜನವರಿ 31ರವರೆಗೆ ನಡೆಯುತ್ತಿರುವ ದೆಹಲಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾಳೆ.
Also read: ಶೈಕ್ಷಣಿಕ ಉನ್ನತಿಗೆ ವಿದ್ಯುನ್ಮಾನ ಸಂಪನ್ಮೂಲಗಳ ಲಾಭ ಪಡೆಯಿರಿ | ನಾರಾಯಣ ರಾವ್
ಈಗಾಗಲೇ ಮಾನ್ಯ ಉಪರಾಷ್ಟçಪತಿಗಳ ಭೇಟಿ, ಮಾನ್ಯ ರಕ್ಷಣಾ ಮಂತ್ರಿಗಳ ಭೇಟಿ, ಭೂಸೇನಾ ಮುಖ್ಯಸ್ಥರ ಭೇಟಿ ಹಾಗೂ ವಾಯುಸೇನಾ ಮುಖ್ಯಸ್ಥರ ಭೇಟಿಯಲ್ಲಿ ಈಕೆ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾಳೆ.
ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಪ್ರಧಾನ ಮಂತ್ರಿಗಳ ರ‍್ಯಾಲಿಯ ಪಥಸಂಚಲನದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ.
ಈ ಪ್ರತಿಭಾವಂತೆ ಮಲ್ಲೇಶ್ವರಂ ಸಮೀಪದ ಮಾರುತಿ ಬಡಾವಣೆ ನಿವಾಸಿಗಳಾದ ಶ್ರೀ ಮುರಳಿ ಕುಕ್ಕುಪುಣಿ ಹಾಗೂ ಡಾ. ಚೈತ್ರಲಕ್ಷಿö್ಮ ಕಮ್ಮಜೆ ಇವರ ಸುಪುತ್ರಿಯಾಗಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post