ಕಲ್ಪ ಮೀಡಿಯಾ ಹೌಸ್ | ಹಾಸನ |
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಅಡ್ಡಗಟ್ಟಿ ಮುಂಭಾಗದ ಗಾಜು ಒಡೆದಿರುವ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಹಾಸನದ ಬೆಂಗಳೂರು ಮಂಗಳೂರು ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಸುಗಮ ಟ್ರಾವೆಲ್ಸ್ ಗೆ ಸೇರಿದ ಬಸ್ಸಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿ ಪ್ರಯಾಣಿಕರಿಗೆ ಭಯ ಉಂಟುಮಾಡಿದ ಕಿಡಿಗೇಡಿ @BlrCityPolice pic.twitter.com/hN5BEN101d
— ಕನ್ನಡಿಗ ದೇವರಾಜ್ (@sgowda79) January 29, 2025
ಬುಧವಾರ ನಸುಕಿನ ಜಾವ 2 ಗಂಟೆ ಸುಮಾರಿನಲ್ಲಿ ಹಾಸನ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರಿನಲ್ಲಿ ಬಂದ ವ್ಯಕ್ತಿ ಬಸ್ಸಿನ ಮುಂದೆ ಕಾರನ್ನು ಅಡ್ಡ ಹಾಕಿ ಮಾರಕಾಸ್ತ್ರದಿಂದ ಬಸ್‌ನ ಮುಂಭಾಗದ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ.
Also read: ಬೆಳಗಾವಿ-ಮೀರಜ್ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಇಲಾಖೆ
ಕಿಡಿಗೇಡಿಯ ಈ ದುಷ್ಕೃತ್ಯವನ್ನು ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆತೆ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















