ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಇರುವಕ್ಕಿ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, University of Agriculture and Horticulure ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ವತಿಯಿಂದ ಗ್ರಾಮೀಣ ‘ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024-25’ ಅಡಿಯಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.
ಶಿಕಾರಿಪುರದ ನೆಲವಾಗಿಲಿನಲ್ಲಿ ಫೆ.೫ರಂದು ಕೃಷಿ ಮತ್ತು ಕಲಾ ಉತ್ಸವ ನಡೆಯಲಿದ್ದು, ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Also read: ಸೊರಬ | ಕೃಷಿ-ಗ್ರಾಮೀಣ ಬ್ಯಾಂಕ್ ಅಧ್ಯಕ್ಷರಾಗಿ ನಾಗರಾಜ್ ಗೌಡ, ಉಪಾಧ್ಯಕ್ಷರಾಗಿ ಯುವರಾಜ್ ಅವಿರೋಧ ಆಯ್ಕೆ
ಕಾರ್ಯಕ್ರಮದ ವಿಶೇಷತೆಗಳು
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ:- ಕೃಷಿ ಮತ್ತು ಕೃಷಿಯೇತರ ಆಕರ್ಷಕ ಮಳಿಗೆಗಳು, ಸಮಗ್ರ ಕೃಷಿ ಪದ್ದತಿ
ಸುರಕ್ಷಿತ ಕೃಷಿ, ಜಲಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ರೇಷ್ಮೆ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು * ಸಾವಯವ ಕೃಷಿ, ಕೋಳಿ ಸಾಕಾಣಿಕೆಯ ತಂತ್ರಜ್ಞಾನ, ಕೋಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ, ರೈತ-ವಿಜ್ಞಾನಿ ಸಂವಾದ, ರೈತ-ಉದ್ದಿಮೆದಾರರ ಸಂವಾದ ನಡೆಯಲಿದೆ.
ವಿಶೇಷ ಸೂಚನೆ: ಕೃಷಿ ಮೇಳದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ದೀಪಕ್: 9353354758, ಮೋಹನ್ ರಾಜ್: 6361921177, ಯೋಗೇಶ್ವರ್ 9739939683 ಅವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post