No Result
View All Result
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?
English Articles

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

by ಕಲ್ಪ ನ್ಯೂಸ್
March 5, 2026
0

Kalpa Media House  |  Bengaluru | Zee Kannada, which continues to entertain audiences with fresh and engaging content and has...

Read moreDetails

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
  • Advertise With Us
  • Grievances
  • About Us
  • Contact Us
Saturday, March 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಗತ್ಯವಾಗಿ ನೋಡಲೇಬೇಕಾದ ನಾಟಕ “ಮೈ ಫ್ಯಾಮಿಲಿ”

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 25, 2025
in Special Articles
0
ಅಗತ್ಯವಾಗಿ ನೋಡಲೇಬೇಕಾದ ನಾಟಕ “ಮೈ ಫ್ಯಾಮಿಲಿ”
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್  |

ಇಂತಹದೊಂದು ನಾಟಕ ನಮ್ಮ ಮಕ್ಕಳಿಂದ ಒಡಗೂಡಿ ಪೋಷಕರವರೆಗೂ ಈಗಿನ ಕಾಲಕ್ಕೆ ಬೇಕಾಗಿತ್ತು ಎಂದೆನಿಸಿದ ನಾಟಕವೇ ‘ಮೈ ಫ್ಯಾಮಿಲಿ’.

ಎಲ್ಲರೂ ನೋಡಲೇಬೇಕಾದ ನಾಟಕ ಏಕೆಂದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಮೊಬೈಲ್ ಇತ್ಯಾದಿಗಳ ಲೋಕದಲ್ಲಿ ಬದುಕುವಂತೆ ಆಗಿದೆ. ಎಲ್ಲರೂ ಅದನ್ನೇ ತಮ್ಮ ಜಗತ್ತೆಂದೂ ಕಳೆದು ಹೋಗುತ್ತಿರುವ ಈ ಹೊತ್ತಿನಲ್ಲಿ, ಬದುಕಿನ ನಿಜವಾದ ಅರ್ಥ ಕಳೆದು ಹೋಗುವುದರಲ್ಲಿಲ್ಲ. ಬದಲಿಗೆ ಸಂತಸದಿಂದ ಬದುಕುವುದರಲ್ಲಿದೆ ಎಂದು ತಿಳಿಸಿದ ನಾಟಕವಾಗಿದೆ.

Also Read>> ಐವರನ್ನು ಭೀಕರ ಹತ್ಯೆಗೈದು ಪೊಲೀಸರ ಮುಂದೆ ಶರಣಾದ ವ್ಯಕ್ತಿ | ಕಾರಣವೇನು?

ಗಣೇಶ್ ಮಂದರ್ತಿಯವರು ನಿರ್ದೇಶಸಿದ ಮೈಸೂರು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕವೇ ಮೈ ಫ್ಯಾಮಿಲಿ. ಪ್ರತಿಯೊಂದು ಕುಟುಂಬ ತಮ್ಮ ಮಕ್ಕಳೊಂದಿಗೆ ಕುಳಿತು ನೋಡಬೇಕಾದ ನಾಟಕವಾಗಿದೆ. ಏಕೆಂದರೆ ಈ ಕಥನವು ಆಧುನಿಕ ತಂತ್ರಜ್ಞಾನ ಮತ್ತು ವೇಗದ ನಗರ ನಾಗರೀಕರಣವು ಉಂಟುಮಾಡುವ ಸಾಂಸ್ಕೃತಿಕ ಪಲ್ಲಟಗಳು ಮಕ್ಕಳು, ಕುಟುಂಬ, ಸಮುದಾಯ ಮತ್ತು ಸಮಾಜದ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ಹುಡುಕುತ್ತಲೇ ಬಿಡುಗಡೆಯ ದಾರಿಗಳನ್ನು ಶೋಧಿಸುವ ಕಾರ್ಯ ಮಾಡಿದೆ.
ಇಂದಿನ ದಿನಗಳಲ್ಲಿ ದುಡಿಮೆಯ ಹಿಂದೆ ಬಿದ್ದು ಅಂದರೆ ಹಣ ಸಂಪಾದನೆಯ ದಾರಿಯಲ್ಲಿಯೇ ಪ್ರಪಂಚ ಮರೆತು ಸಾಗಿ ಮಕ್ಕಳನ್ನು ಒಂಥರಾ ಅನಾಥರನ್ನಾಗಿ ಮಾಡುವ ಪೋಷಕರು ನಿಜಕ್ಕೂ ನೋಡಲೇಬೇಕಾದ ನಾಟಕ ಇದು. ಏಕೆಂದರೆ ಇಂದಿನ ಶಿಕ್ಷಣ ಹಣ ಗಳಿಕೆಗಾಗಿ ಅಷ್ಟೇ ಬಿಟ್ಟರೆ ಅದು ವಿವೇಕ ಕಲಿಸುತ್ತಿಲ್ಲ ಎಂಬುದು ನಾನೊಬ್ಬಳು ಉಪನ್ಯಾಸಕಿಯಾಗಿ ನನಗಾದ ಅನುಭವ. ಹಿಂದೆಲ್ಲಾ ಶಿಕ್ಷಣ ಎಂದರೆ ಶಿಸ್ತು, ಶ್ರದ್ಧೆ, ಸಂಸ್ಕಾರ, ಪ್ರಾಮಾಣಿಕತೆ, ಮೌಲ್ಯ ಇತ್ಯಾದಿಯಾಗಿ ಭಾವಿಸುತ್ತಿದ್ದ ನಾವು ಇಂದು ಶಿಕ್ಷಣ ಎಂದರೆ ಹಣ ಗಳಿಸುವ ಕೋರ್ಸ್ ಗಳನ್ನು ಓದಿ ಅದರಿಂದ ಹಣ ಸಂಪಾದಿಸುವುದು ಎನ್ನುವುದಕ್ಕಷ್ಟೇ ಸೀಮಿತವಾಗಿದೆ.

Also Read>> ಫೆ. 28 | ಸಾಮೂಹಿಕ ಓಂ ನಮಃ ಶಿವಾಯ ಜಪ ಯಜ್ಞ | ಶ್ರೀರಾಮಾನುಗ್ರಹ ಪ್ರಶಸ್ತಿ ಪ್ರದಾನ

ಈ ನಾಟಕದಲ್ಲಿನ ಎಲ್ಲ ಪಾತ್ರಗಳು ನಮ್ಮ ಹತ್ತಿರಕ್ಕೆ ಬಂದು ನಮ್ಮನ್ನಾವರಿಸಿಬಿಡುತ್ತವೆ. ಸ್ಯಾಮ್ ಸಾನ್ವಿಯರ ಬಾಲ್ಯ ಕೇವಲ ಮೊಬೈಲ್ ವಿಡಿಯೋ ಗೇಮ್ ಗಳ ಜೊತೆಗೆ ಕಳೆಯುವುದು. ತಂದೆ ಭಾರ್ಗವ್ ಕುಟುಂಬ ಚೆನ್ನಾಗಿರಬೇಕೆಂದೇ ಸದಾ ಆಫೀಸ್ ಆಫೀಸ್ ಎಂದು ಹೋಗುವುದು, ತಾಯಿ ಸೌಮ್ಯ ತನ್ನ ಆಫೀಸ್ ಹಾಗೂ ಪಾರ್ಟಿ ಇವುಗಳಲ್ಲಿಯೇ ಕಾಲ ಕಳೆಯುವುದು, ಮನೆ ಕೆಲಸದಾಕೆ ಸಿರಿ ಮಾತ್ರ ತನ್ನ ಸಮೃದ್ಧ ಬಾಲ್ಯ ಅನುಭವಿಸಿ ಅವುಗಳ ವರ್ಣನೆ ಮಾಡುವಾಗ ಮಕ್ಕಳಿಗೆ ಅಚ್ಚರಿಯೆನಿಸುವುದು, ಹಳ್ಳಿಯ ವಾತಾವರಣದಲ್ಲಿ ಬೆಳೆದ ಆಕೆಯ ಆಟ, ಪಾಠ, ಜಾತ್ರೆ, ನಾಟಕ ಇವುಗಳ ವಿವರಿಸುವಾಗ ಸಿರಿಯ ತಲ್ಲೀನತೆ, ನಂತರ ಸ್ಯಾಮ್ ಗೆ ಹಿಡಿಯುವ ಮೊಬೈಲ್ ಗೀಳು, ಅದರಿಂದ ಅವನು ಅನುಭವಿಸುವ ಯಾತನೆ, ಅವನಿಗೆ ಕನಸೆಂದರೆ ಘೋರ ಎನಿಸುವುದು, ಅದರ ಸ್ವರೂಪ, ಸತಿಪತಿಯರ ಕಲಹ ಎಲ್ಲವನ್ನು ನಮ್ಮ ಕಣ್ಣೆದುರಿಗೆ ತಂದ ರೀತಿ ಇದೆಯಲ್ಲ ಅದು ಬಹಳ ಚಂದವಿತ್ತು. ಸಂಬಂಧಗಳ ಪ್ರಾಮುಖ್ಯತೆ, ಹಣದ ಹಿಂದೆ ಹೋದರೆ ಹಾಳಾಗುವ ಬಾಳು. ಸುಖವ ಅರಸಿ ಹೋಗಿ ಎಲ್ಲವನ್ನು ಕಳೆದುಕೊಳ್ಳುವ ರೀತಿ ಇವೆಲ್ಲವೂ ಇಂದಿಗೆ ಪ್ರಸ್ತುತ.
ಇಲ್ಲಿ ಬರುವ ನಾಟಕದೊಳಗೊಂದು ನಾಟಕ, ರಾಗಿ ಬೋರನಕಥೆ, ಹಳ್ಳಿಯ ಬದುಕಿನ ಶೈಲಿ ಎಲ್ಲವನ್ನ ಕಟ್ಟಿಕೊಟ್ಟ ರೀತಿ ಅದ್ಭುತವಾಗಿತ್ತು. ಗೊಂಬೆಗಳ ದೃಶ್ಯಗಳಂತೂ ಒಳ್ಳೆಯ ರೂಪಕವಾಗಿ ನಾಟಕ ನೋಡುಗನ ಆಕರ್ಷಣೆ ಎಂದರೆ ಅದೇ ಎಂದಂತೆ ಆಗಿತ್ತು. ಅದರ ರೋಚಕತೆ ಮಾತುಗಳು ಮಾತ್ರ ತಲುಪಲು ಸಾಧ್ಯವಾಗದ ಸಂಗತಿಗಳನ್ನು ದೃಶ್ಯ ರೂಪ ಗಳಿಂದ ಅದರ ಭಾವನೆ ಸಹೃದಯ ಪ್ರೇಕ್ಷಕರ ಮನದಾಳಕ್ಕೆ ಉಳಿಯುವಂತೆ ಮಾಡುವಂತೆ ಆಯಿತು. ಮಕ್ಕಳಾಗಲಿ ದೊಡ್ಡವರಾಗಲಿ ತಮ್ಮ ಗಮನವನ್ನು ಸ್ವಲ್ಪವೂ ಬೇರೆಡೆಗೆ ಹೋಗದಂತೆ ಈ ನಾಟಕ ಹಿಡಿದಿಟ್ಟಿತ್ತು. ಆದ್ದರಿಂದಲೇ ಇದೊಂದು ಯಶಸ್ವಿ ರಂಗ ಪ್ರಯೋಗವಾಗಿದೆ.

ಕುವೆಂಪುರವರ ಗೀತೆಯಾದ-“ಮಕ್ಕಳ ಸಂಘದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು…. “ಎನ್ನುವುದನ್ನು ಸಂದರ್ಭಕ್ಕೆ ತಕ್ಕಂತೆ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರಾದ ಗಣೇಶ್ ಮಂದರ್ತಿಯವರು ಯಶಸ್ವಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಅವರ ಕಲಾತ್ಮಕ ಆಲೋಚನೆ ನೋಡುಗನನ್ನು ಸೆಳೆದು ಚಿಂತನೆಗೆ ಒರೆಹಚ್ಚುವಂತಾಗಿದೆ. ಪ್ರತಿಯೊಬ್ಬನು ಸಹ ಒಂದಲ್ಲ ಒಂದು ರೀತಿಯಲ್ಲಿ ಕುಟುಂಬಕ್ಕೆ ಮಕ್ಕಳಿಗೆ ಮಹತ್ವ ಕೊಡದೆ ದುಡಿಮೆಯೇ ಬದುಕು ಎಂದು ಜೀವನ ಸಾಗಿಸುತ್ತಿರುವ ಈ ಹೊತ್ತಿನಲ್ಲಿ ಬದುಕು ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.   ಸ್ಕ್ರಿಪ್ಟ್, ಡ್ರಾಮೆಟರ್ಜಿ, ಪರಿಕಲ್ಪನೆ ವಿನ್ಯಾಸ ರಂಗ ವಿನ್ಯಾಸ ಪ್ರಸಾದನ ರಂಗ ಸಜ್ಜಿಕೆ ವಸ್ತ್ರಾಲಂಕಾರ ಬೆಳಕು ಈ ಎಲ್ಲವುಗಳು ಅತ್ಯದ್ಭುತ. ಸ್ವಲ್ಪ ಹೆಚ್ಚು ಎನಿಸದ ಕಡಿಮೆಯೂ ಆಗದ ಹದವಾಗಿ ಇಂಪೆನಿಸುವ ಸಂಗೀತ ಇದರ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಅಭಿನಯಿಸಿದ ನಟರಂತೂ ನಮ್ಮ ಸುತ್ತಲೇ ಇದು ನಡೆಯುತ್ತಿದೆ ಏನೋ ಎನ್ನುವಂತೆ ನಟಿಸಿ ಸಹೃದಯರ ಹೃದಯ ಗೆದ್ದರು.

ಈ ರೀತಿಯ ರಂಗ ಪ್ರಯೋಗಗಳು ಶಾಲೆಗಳಲ್ಲಿ ಪೋಷಕರುಗಳಿಗೆ ಪ್ರದರ್ಶನವಾಗಿ ಇನ್ನೂ ಹೆಚ್ಚು ಹೆಚ್ಚು ಎಲ್ಲರಿಗೂ ತಲುಪುವಂತೆ ಆಗಬೇಕು. ನಿಜಕ್ಕೂ ಈ ಕಾಲಘಟ್ಟದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ನೋಡಲೇಬೇಕಾದ ನಾಟಕ ಇದು ಎಂದು ಹೇಳುತ್ತಾ ಇಂತಹ ಒಂದು ಒಳ್ಳೆಯ ಕಲ್ಪನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

Tags: Kannada News WebsiteKuvempuLatest News KannadaMythreyi PrasadShimogaShivamoggaShivamogga NewsSpecial Articleಕುವೆಂಪುನಾಟಕಮೈತ್ರೇಯಿ ಆದಿತ್ಯಪ್ರಸಾದ್ಮೈಸೂರು ರಂಗಾಯಣವಿಶೇಷ ಲೇಖನ
Share196Tweet123Send
Previous Post

ಮಹಾಶಿವರಾತ್ರಿ | ಫೆ.26ರಂದು ವಿವಿಧೆಡೆ ವಿಶೇಷ ಧಾರ್ಮಿಕ ಕಾರ್ಯಕ್ರಮ

Next Post

ಗಮನಿಸಿ! ಫೆ.26-27ರಂದು ಶಿವಮೊಗ್ಗದ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಆದೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆ ಶಿವಮೊಗ್ಗ-ಭದ್ರಾವತಿ ಸಂಚಾರ ಮಾರ್ಗ ಬದಲಾವಣೆ

ಗಮನಿಸಿ! ಫೆ.26-27ರಂದು ಶಿವಮೊಗ್ಗದ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಆದೇಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶಿವಮೊಗ್ಗ | ನಡುರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಡಸ್ಟರ್ ಕಾರು

ಶಿವಮೊಗ್ಗ | ನಡುರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಡಸ್ಟರ್ ಕಾರು

March 6, 2026
ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!

ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!

March 6, 2026
ಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ: MLC ಡಾ. ಧನಂಜಯ ಸರ್ಜಿ

ಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ: MLC ಡಾ. ಧನಂಜಯ ಸರ್ಜಿ

March 6, 2026
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಶೀಘ್ರ 15 ಸಾವಿರ ಶಿಕ್ಷಕರ ನೇಮಕ

ಭರವಸೆ ಮೂಡಿಸುವ, ಜನಪ್ರಿಯ ಅಂಶಗಳ ಬಜೆಟ್ | ಆರ್ಥಿಕ ವಿಶ್ಲೇಷಕ ಡಾ. ಎಂ.ಎಸ್. ಮಂಜುನಾಥ್

March 6, 2026
ಉದ್ಯೋಗಾಕಾಂಕ್ಷಿಗಳಿಗೆ ಬಜೆಟ್’ನಲ್ಲಿ ಬಿಗ್ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕಾರವಾರದಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

March 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL