ಕಲ್ಪ ಮೀಡಿಯಾ ಹೌಸ್ | ಹೊಸನಗರ |
ನೀರಿನಲ್ಲಿ ಈಜಲು ಹೋದ ಬಾಲಕನೊರ್ವ ಮುಳುಗಿ ಸಾವು #Boy Death by Drowning ಕಂಡ ಘಟನೆ ತಾಲ್ಲೂಕಿನ ಬ್ರಹ್ಮೇಶ್ವರದ ಅಂಬೇಡ್ಕರ್ ಕಾಲೋನಿಯಲ್ಲಿ ಭಾನುವಾರ ನಡೆದಿದೆ.
ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಮಂತ (15) ಮೃತ ಬಾಲಕ ಆಗಿದ್ದಾನೆ.
Also read: ಶಿವಮೊಗ್ಗ | 3 ಪಟ್ಟಣ ಪಂಚಾಯ್ತಿಗೆ ಶರಾವತಿಯಿಂದ ಶಾಶ್ವತ ನೀರು | ಸಚಿವ ಭೈರತಿ ಹೇಳಿದ್ದೇನು?
ಬ್ರಹ್ಮೇಶ್ವರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಮುರುಗೇಶ್ ಮತ್ತು ಲಕ್ಷ್ಮಿ ದಂಪತಿಗಳ ಏಕೈಕ ಪುತ್ರ ಆಗಿದ್ದಾನೆ.
ಭಾನುವಾರ ಸಂಜೆ ಕೆಲಸಕ್ಕೆ ಹೋಗಿದ್ದ ತಂದೆ ತಾಯಿ ಮನೆಗೆ ಮರಳಿದಾಗ ಮಗ ಇಲ್ಲದನ್ನು ಕಂಡು ಅಕ್ಕ-ಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಹುಡುಕಾಡಿದಾಗ ಕಲ್ಲುಕ್ವಾರೆಯಲ್ಲಿ ಸಂಗ್ರಹವಾಗ ನೀರಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ರಜಾದಿನ ವಾದ ಭಾನುವಾರ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post