ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ವಿಭಾಗ ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕ್ಷಯ ಮುಕ್ತ ಭಾರತ 2025 ರ ಅಭಿಯಾನ ಸಂಬಂಧ ವಿಶ್ವ ಕ್ಷಯ ರೋಗ ದಿನಾಚರಣೆಯು ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು ಬದ್ಧರಾಗಿರಿ, ಹೂಡಿಕೆ, ಮಾಡಿ, ತಲುಪಿಸಿಎಂಬ ಘೋಷ ವಾಕ್ಯದ ಮಾಹಿತಿ ತಿಳಿಸಲಾಯಿತು.
ಪ್ರಾರ್ಥನೆಯನ್ನು ಡಾ. ಅಶ್ವಿನಿ ಹಾಗೂ ಅಮೃತ ಅವರಿಂದ ನಡೆಸಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಂದ ಡಾ. ಸತೀಶ್ ಕುರ್ಮಾ ಸ್ವಾಗತ ಭಾಷಣ ನಡೆಸಿಕೊಟ್ಟರು.
ಕಾರ್ಯಕ್ರಮ ಸಂಬಂಧ ಪ್ರಸ್ತಾವಿಕ ನುಡಿ ಹಾಗೂ ಕಾರ್ಯಕ್ರಮ ಸಂಬಂಧ ಮಾಹಿತಿ ಹಾಗೂ ಕೊಡಗು ಜಿಲ್ಲೆಗೆ ದಾನವಾಗಿ ಸಿಬಿನೆಟ್ ಮಿಷಿನ್ ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಮಂಗಳೂರು ನೀಡಿರುವ ಮಾಹಿತಿಯನ್ನು ಡಿಟಿಒ ಡಾ. ಸನತ್ ಕುಮಾರ್ ಜಿ ಕೆ ವರು ಮಾಹಿತಿ ನೀಡಿದರು.
Also read: ಕಾಂಗ್ರೆಸ್-ಕಮ್ಯುನಿಸ್ಟ್ ಬರೀ ಭ್ರಷ್ಟಾಚಾರದ ಆಡಳಿತ; ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ಉದ್ಘಾಟನೆಯನ್ನು ಡಾ.ಲೋಕೇಶ್ ಎಜೆ ಡಿನ್ ಹಾಗೂ ನಿರ್ದೇಶಕರು ಕೊಡಗು ವೈದ್ಯಕೀಯ ವಿದ್ಯಾಸಂಸ್ಥೆ ನಡೆಸಿಕೊಟ್ಟರು, ಮುಖ್ಯ ಅತಿಥಿಗಳಾಗಿ ಡಾ.ಆನಂದ್ ಆರೋಗ್ಯ ಇಲಾಖೆ ರವೀಂದ್ರ ರೈ ಸಭಾಪತಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಡಗು ಹಾಗೂ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಅರುಣ್ ಕುರ್ಮಾ ಅವರು ಹಾಜರಿದ್ದು ಕಾರ್ಯಕ್ರಮ ಸಂಬಂಧ ಅತಿಥಿ ಭಾಷಣ ಮಾಡಿದರು.
ಜಿಲ್ಲೆಯಲ್ಲಿ 21 ಕ್ಷಯಮುಕ್ತ ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು, 3 ಬೆಳ್ಳಿಯ ಪದಕ ಪಡೆದ ಬಲ್ಲಮಾವಟಿ ಅಯ್ಯಂಗೇರಿ, ಕಾಕೋಟುಪರಂಬು ಹಾಗೂ ಕಂಚಿನ ಪದಕ 18 ಮಡಿಕೇರಿ ತಾಲೂಕಿನ ಹಾಕತ್ತೂರು, ಮಕ್ಕಂದೂರು, ನಾಪೋಕ್ಲು, ಸಂಪಾಜೆ ಮತ್ತು ಎಮ್ಮೆಮಾಡು, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು, ತ್ಯಾಗತ್ತೂರು, ಆಲೂರು ಸಿದ್ದಾಪುರ ಬೆಟ್ಟದಲ್ಲಿ, ಬ್ಯಾಡಗುಟ್ಟ, ಗರ್ವಾಲೆ, ವಿರಾಜಪೇಟೆ ಹಾಗೂ ಪೆನ್ನಂಪೇಟೆ ತಾಲೂಕಿನ ಕದನೂರು, ಪಾಲಿಬೆಟ್ಟ, ದೇವರಪುರ ಮತ್ತು ಪೆನ್ನಪ್ಪಸಂತೆ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ಪದಕವನ್ನು ನೆನಪಿನ ಕಾಣಿಕೆ ನೀಡಲಾಯಿತು.
ಕ್ಷಯಮುಕ್ತ ಗ್ರಾಮ ಪಂಚಾಯಿತಿ ಸಂಬಂಧ ಪಿಡಿಒ ಹಾಗೂ ಅಧ್ಯಕ್ಷರು ಆತ್ಮೀಯ ಹಾಗೂ ಹೃದಯ ಪೂರ್ವಕ ಅನಿಸಿಕೆ ವ್ಯಕ್ತಪಡಿಸಿದರು.
ಭಾದಿತಾ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ಟನ್ನು ದಾನವಾಗಿ ನೀಡಿದ ದಾನಿಗಳಾದ ಡಾ.ಆನಂದ್ ಹಾಗೂ ರವೀಂದ್ರ ರೈ ಹಾಗೂ ರವಿಚಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಬಂಧ ವೈದ್ಯಕೀಯ ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಸಂಬಂಧ ಅಧ್ಯಕ್ಷರ ಭಾಷಣ ಹಾಗೂ ಉಪನ್ಯಾಸ ರಸಪ್ರಶ್ನೆ ಕಾರ್ಯಕ್ರಮವನ್ನು ಡಾ.ರಾಮಚಂದ್ರ ಕಾಮತ್ ಮುಖ್ಯಸ್ಥರು ಸಮುದಾಯ ಆರೋಗ್ಯ ವಿಭಾಗ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರವರು ನೆರವೇರಿಸಿದರು.
ನಿರೂಪಣೆಯನ್ನು ಎಂ.ಮಾದೇವಪ್ಪ ಹಿರಿಯ ಚಿಕಿತ್ಸೆ ಮೇಲ್ವಿಚಾರಕರು ನಡೆಸಿಕೊಟ್ಟರು. ವಂದನಾರ್ಪಣೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಾಥ್ ರವರು ನಡೆಸಿ ಕೊಟ್ಟಿರುತ್ತಾರೆ.
ಕ್ಷಯ ರೋಗದ ಅರಿವಿಗಾಗಿ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜಿಂಗಲ್ಸ್ ಹಾಗೂ ಆರೋಗ್ಯ ಶಿಕ್ಷಣ ಮಳಿಗೆ ತೆರೆದು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯ ಮುಖ್ಯ ವೈದ್ಯಾಧಿಕಾರಿಗಳು ವೈದ್ಯಾಧಿಕಾರಿಗಳು ತರಬೇತಿ ಅರೆ ವೈದ್ಯಕೀಯ ಸಿಬ್ಬಂದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳ ಕಚೇರಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಪಂಚಾಯತಿ ಪಿಡಿಒ ಹಾಗೂ ಅಧ್ಯಕ್ಷರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post