ಕಲ್ಪ ಮೀಡಿಯಾ ಹೌಸ್ | ಕಡಬ |
ಮಧ್ಯಾಹ್ನ ಊಟ ಮಾಡಿಸಿ ಮಲಗಿಸಿದ್ದ 2.5 ವರ್ಷದ ಮಗುವೊಂದು ನಿಗೂಢವಾಗಿ ಸಾವನ್ನಪ್ಪಿರುವ #Child Death ಘಟನೆ ತಾಲೂಕಿನ ಕೊಣಾಜೆಯ ಮಾಲ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಕೊಣಾಜೆ ಮಾಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಪುತ್ರ ರುದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
Also read: ಮೇಕೆದಾಟು ವಿಚಾರವಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
ಮಗುವಿಗೆ ಮಧ್ಯಾಹ್ನ ಊಟ ಮಾಡಿಸಿ ಮಲಗಿಸಲಾಗಿತ್ತು. ಸಂಜೆ ವೇಳೆ ಮಗುವನ್ನು ಎಬ್ಬಿಸಲು ಹೋದಾಗ ಮಗು ಏಳದೇ ಇದ್ದುದರಿಂದ ತಕ್ಷಣವೇ ಮಗುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮಗು ಆಹಾರ ಸಿಲುಕಿಕೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರಬಹುದಾಗಿದ್ದು, ಮಗುವಿನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಯಿ ದಿವ್ಯಾಂಶಿ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.
ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post