No Result
View All Result
HOSMAT Hospitals Partners with South United Football Club as Official Sports Medicine & Medical Services Leader
English Articles

HOSMAT Hospitals Partners with South United Football Club as Official Sports Medicine & Medical Services Leader

by ಕಲ್ಪ ನ್ಯೂಸ್
February 15, 2026
0

Kalpa Media House  |  Bengaluru  | HOSMAT Hospitals, a recognised leader in orthopaedics, trauma and sports medicine for over three...

Read moreDetails
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
Tata Motors Indonesia Secures its Biggest Order for 70,000 Yodha and Ultra T.7 Vehicles for Deployment

Tata Motors Indonesia Secures its Biggest Order for 70,000 Yodha and Ultra T.7 Vehicles for Deployment

February 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
  • Advertise With Us
  • Grievances
  • About Us
  • Contact Us
Thursday, February 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಂಡಾರ ಕೇರಿ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ | ಹಲವು ವಿದ್ವನ್ ಮಣಿಗಳ ಸಮಾಗಮ

ಪ್ರವಚನ, ಸಂಗೀತ,‌ ನೃತ್ಯ ಮತ್ತು ಅಮೃತೋಪದೇಶ ಆಯೋಜನೆ | ಶ್ರೀ ವಿದ್ಯೇಶ ತೀರ್ಥರ ಸಾರಥ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 30, 2025
in Special Articles
0
ಭಂಡಾರ ಕೇರಿ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ | ಹಲವು ವಿದ್ವನ್ ಮಣಿಗಳ ಸಮಾಗಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಬರಹ:ಶಿವಮೊಗ್ಗ ರಾಮ  |

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ರಾಮ ನವಮಿ ಸಂಭ್ರಮಕ್ಕೆ ವೇದಿಕೆ ಸನ್ನದ್ಧವಾಗಿದೆ. ಯುಗಾದಿ, ನವ ಸಂವತ್ಸರ ದಿನದಿಂದ ದಶಮಿ ಪರ್ಯಂತ ಶ್ರೀ ಮಠದಲ್ಲಿ ಧಾರ್ಮಿಕ ಸಾಂಸ್ಕೃತಿಕ ಮತ್ತು ಜ್ಞಾನಕಾರಕ 10 ಹಲವು ವೈವಿಧ್ಯಗಳು ಮೇಳೈಸಲಿವೆ.

22ನೇ ವರ್ಷದ ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿ ಮಾರ್ಚ್ 30 ರಿಂದ ಏಪ್ರಿಲ್ 7 ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಮಠ ಆಯೋಜಿಸಿದೆ.

Also Read>> Extension of Partial Cancellation of Miraj-Castle Rock-Miraj Trains

ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿದಿನವೂ ವಿಭಿನ್ನವಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಚಿಂತನಾತ್ಮಕ ಕಾರ್ಯಕ್ರಮಗಳು ಭಕ್ತರಿಗೆ ರಂಜನೆ-ಬೋಧನೆಯೊಂದಿಗೆ ಭಕ್ತಿ ಭಾವಗಳನ್ನು ಪ್ರಚೋದಿಸಲಿದೆ.

http://kalpa.news/wp-content/uploads/2025/03/PES-Video.mp4

ಮಾ. 30ರ ಸಂಜೆ 5:30ಕ್ಕೆ ಶ್ರೀಮದ್ ರಾಮಾಯಣದ ಪ್ರೇರಣದಾಯಕ ಚಿಂತನೆ ಕಾರ್ಯಕ್ರಮಗಳು ಬಾಲಕಾಂಡದಿಂದ ಆರಂಭಗೊಳ್ಳಲಿದ್ದು, ಹಿರಿಯ ವಿದ್ವಾಂಸ ಡಾ. ಸತ್ಯ ನಾರಾಯಣಾಚಾರ್ಯ ಅವರು ಪ್ರವಚನ ಮಾಲಿಕೆಗೆ ಚಾಲನೆ ನೀಡಲಿದ್ದಾರೆ.

ಮಹರ್ಷಿ ವಾಲ್ಮೀಕಿ ಅವರಿಂದ ರಚಿತಗೊಂಡ ಶ್ರೀಮದ್ ರಾಮಾಯಣವು ವಿಶ್ವ ಪರಂಪರೆಗೆ ಮಹತ್ತರ ಆದರ್ಶವನ್ನು ಪ್ರತ್ಯಕ್ಷವಾಗಿ ತೋರಿಸಿದ ಮಹೋನ್ನತ ಕೃತಿ. ಶ್ರೀರಾಮಚಂದ್ರ ಇಡೀ ಜಗತ್ತಿನ ಮೇರು ಮರ್ಯಾದಾ ಪುರುಷೋತ್ತಮ. ಶ್ರೀ ರಾಮನವಮಿ ಸಂದರ್ಭದಲ್ಲಿ ನಾಡಿನ ಭಕ್ತ ಸಮುದಾಯಕ್ಕೆ ಸರಳ ಮತ್ತು ಸುಲಭವಾಗಿ ತಿಳಿಯುವ ಬಹು ಮಾಧ್ಯಮದ ಮೂಲಕ ರಾಮಾಯಣದ ಸಂದೇಶಗಳನ್ನು ತಲುಪಿಸಲು ಹೆಮ್ಮೆ ಮತ್ತು ಸಂಭ್ರಮ ಎನಿಸುತ್ತದೆ.
-ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಪೀಠಾಧಿಪತಿ, ಭಂಡಾರ ಕೇರಿ ಮಠ

ಏ. 7ರವರೆಗೆ ಪ್ರತಿದಿನವೂ ಸಂಜೆ 5.30ಕ್ಕೆ ವಿವಿಧ ವಿದ್ವಾಂಸರಿಂದ ಚಿಂತನ- ಮಂಥನ ಸರಣಿ ಪ್ರವಚನ ನೆರವೇರಲಿದೆ.ಹಿರಿಯ ವಿದ್ವಾಂಸರಾದ ಆನಂದತೀರ್ಥಾಚಾರ್ಯ ವೆಂಕಟೇಶ ಆಚಾರ್ಯ ನಾಗರಾಜ ಆಚಾರ್ಯ ವಿಜಯಸಿಂಹ ಆಚಾರ್ಯ ಶ್ರೀನಿಧಿ ಮಾಶಿಷ್ಠ ಮತ್ತು ನಾಗೇಂದ್ರ ಆಚಾರ್ಯ ಅವರು ಶ್ರೀಮದ್ ರಾಮಾಯಣದ ವಿಶೇಷ ಪ್ರಸಂಗ ಸನ್ನಿವೇಶ ಮತ್ತು ಸಂದೇಶಗಳನ್ನು ಪಾಂಡಿತ್ಯ ಪೂರ್ಣ ಉಪನ್ಯಾಸದ ಮೂಲಕ ಹೊರ ಹೊಮ್ಮಿಸಲಿದ್ದಾರೆ.

ಧರ್ಮ, ಸಂಸ್ಕೃತಿ, ಭಾಷೆ ಮತ್ತು ಪರಂಪರೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ನೂರಾರು ಭಕ್ತಿ ಕೃತಿಗಳನ್ನು ರಚಿಸಿದ್ದಾರೆ. ಅವುಗಳನ್ನು ನೃತ್ಯಕ್ಕೆ ಸಂಯೋಜಿಸಿ ನರ್ತನ ಮಾಡುವುದು ಒಂದು ಸವಾಲು. ಕೃತಿ ಒಳಗಿರುವ ಅರ್ಥವನ್ನು ತಿಳಿದುಕೊಳ್ಳಲು ನಾನು ಅನೇಕ ಪ್ರವಚನಗಳನ್ನು ಕೇಳಿದೆ. ನನ್ನ ತಂದೆ ವಿದ್ವಾನ್ ಹರಿದಾಸ ಭಟ್ಟರಲ್ಲಿ ಸಾಕಷ್ಟು ಚರ್ಚೆಗಳನ್ನು ಮಾಡಿದೆ. ವಿದುಷಿ ಶುಭಾ ಸಂತೋಷ್ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಮೂಡಿಬಂದಿರುವ ಕೃತಿಗಳಲ್ಲಿ ಕೆಲವಾರು ನೃತ್ಯಕ್ಕೂ ಹೊಂದುವ ಹಾಗೆ ಇದೆ. ಕೃತಿಯ ಆಳ, ಅಗಲ, ವಿಸ್ತಾರ ತಿಳಿದು ನರ್ತನದ ಮೂಲಕ ಭಾವ ಹೊಮ್ಮಿಸುವುದು ರಾಮ ನವಮಿಯ ಸಂದರ್ಭದಲ್ಲಿ ವಿಶೇಷ ಸುಕೃತವಾಗಿದೆ.
-ವಿದುಷಿ ಪ್ರಜ್ಞಾ ಕಿಶೋರ್, ಮಯೂರಿ ನಾಟ್ಯಶಾಲೆ ನಿರ್ದೇಶಕಿ. ಬೆಂಗಳೂರು

ಅಕ್ಷಯ್ ಮತ್ತು ಅಭಿಷೇಕ್

ನಂತರ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಶಿಖರಪ್ರಾಯ ಅಮೃತೋಪದೇಶ ನೀಡಲಿದ್ದಾರೆ. ಏಪ್ರಿಲ್ 3ರ ಸಂಜೆ 5:30ಕ್ಕೆ ಗಾಯಕರಾದ ಅಕ್ಷಯ್ ಮತ್ತು ಅಭಿಷೇಕ್ ಸಂಗಡಿಗರು ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಗಾಯನ ಕಚೇರಿ ನಡೆಸಿಕೊಡಲಿದ್ದಾರೆ.

ವಿದುಷಿ ಪ್ರಜ್ಞಾ ಹರಿದಾಸ ಭಟ್

ನರ್ತನ ವೈಭವ
ಏ. 4ರ ಸಂಜೆ 5:30ಕ್ಕೆ ಮಯೂರಿ ನಾಟ್ಯಶಾಲೆಯ ವಿದುಷಿ ಪ್ರಜ್ಞಾ ಹರಿದಾಸ ಭಟ್ ಶಿಷ್ಯರು ಶ್ರೀ ವಿದ್ಯೇಶ ವಿಠಲ ಅಂಕಿತ ಕೃತಿಗಳನ್ನು ಆಧರಿಸಿ ನೃತ್ಯೋತ್ಸವ ಪ್ರಸ್ತುತ ಪಡಿಸಲಿದ್ದಾರೆ. 10 ಕಲಾವಿದರು ಏಳು ಕೃತಿಗಳಿಗೆ ನರ್ತನ ಮಾಡುತ್ತಿರುವುದು ವಿಶೇಷವಾಗಿದೆ‌.

ರಥೋತ್ಸವ
ಶ್ರೀ ರಾಮನವಮಿ ಪ್ರಯುಕ್ತ ಏ.6ರಂದು ಶ್ರೀಮಠದಲ್ಲಿ ಬೆಳಗ್ಗೆ 7.30 ರಿಂದ ಶ್ರೀ ಕೋದಂಡರಾಮ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಸಂಸ್ಥಾನ ಪೂಜೆ, ಸಂಜೆ 6ಕ್ಕೆ ರಂಗ ಪೂಜೆ, 7ಕ್ಕೆ ಕೋದಂಡರಾಮ ದೇವರ ರಥೋತ್ಸವ ಸಂಪನ್ನಗೊಳ್ಳಲಿದೆ.

ಏಪ್ರಿಲ್ ಏಳರಂದು ಮಠದಲ್ಲಿ ಬೆಳಗಿನ ಅವಧಿಯಲ್ಲಿ ಶ್ರೀ ರಾಮ ತಾರಕ ಹೋಮ ಮತ್ತು ಸಂಜೆ ಶ್ರೀಮದ್ ರಾಮಾಯಣ ಪ್ರವಚನ ಮಂಗಳ ಮಹೋತ್ಸವ ನೆರವೇರಲಿದೆ‌. ಭಕ್ತರು ಆಗಮಿಸಬೇಕು ಎಂದು ಶ್ರೀ ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ. ವಿವರಗಳಿಗೆ 99728362 05 ಸಂಪರ್ಕಿಸಲು ಕೋರಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: Bhandarakeri MathaKannada News WebsiteLatest News KannadaLord RamaRama NavamiUgadiYugadiನವ ಸಂವತ್ಸರಬೆಂಗಳೂರುಭಂಡಾರ ಕೇರಿಯುಗಾದಿಶ್ರೀ ಭಂಡಾರ ಕೇರಿ ಮಠಶ್ರೀ ರಾಮನವಮಿಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ
Share196Tweet123Send
Previous Post

ಶಿವಮೊಗ್ಗ | ಯುಗಾದಿ ಹಬ್ಬದ ಖರೀದಿ ಜೋರು | ಹೇಗಿದೆ ಹೂವು, ಹಣ್ಣು, ಅಗತ್ಯ ವಸ್ತುಗಳ ಬೆಲೆ?

Next Post

ಗಮನಿಸಿ! ಅರಸೀಕೆರೆ-ನರಸಾಪುರ ರೈಲು ಪ್ರಯಾಣಿಕರಿಗೆ ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಹುಬ್ಬಳ್ಳಿ-ಹೃಷಿಕೇಶ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು | ಮಾರ್ಗ ಯಾವುದು?

ಗಮನಿಸಿ! ಅರಸೀಕೆರೆ-ನರಸಾಪುರ ರೈಲು ಪ್ರಯಾಣಿಕರಿಗೆ ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಫೆ.21ರಂದು ವಿಪ್ರ ಸಮಾವೇಶ | ಶ್ರೀ ಶಂಕರ ಚೈತನ್ಯ ವೇದಿಕೆಗೆ ಚಾಲನೆ

ಫೆ.21ರಂದು ವಿಪ್ರ ಸಮಾವೇಶ | ಶ್ರೀ ಶಂಕರ ಚೈತನ್ಯ ವೇದಿಕೆಗೆ ಚಾಲನೆ

February 19, 2026
ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಲೈಂಗಿಕ ದೌರ್ಜನ್ಯ ಆರೋಪ | ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್‌ ಬಂಧನ

February 19, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಶಿವಮೊಗ್ಗ | ಕುಂಸಿ, ಅರಸಾಳು ರೈಲು ಪ್ರಯಾಣಿಕರಿಗೆ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟ ಇಲಾಖೆ

February 19, 2026
ಸೊರಬ ಕಸಾಪ ಸಮ್ಮೇಳನ ಅಧ್ಯಕ್ಷರಾಗಿ ಶ್ರೀಪಾದ ಬಿಚ್ಚುಗತ್ತಿ ಆಯ್ಕೆ ಹೆಮ್ಮೆಯ ಸಂಗತಿ: ಪ್ರಜ್ವಲ್

ಸೊರಬ ಕಸಾಪ ಸಮ್ಮೇಳನ ಅಧ್ಯಕ್ಷರಾಗಿ ಶ್ರೀಪಾದ ಬಿಚ್ಚುಗತ್ತಿ ಆಯ್ಕೆ ಹೆಮ್ಮೆಯ ಸಂಗತಿ: ಪ್ರಜ್ವಲ್

February 19, 2026
ಜೆಇಇ ಮೈನ್ಸ್ ಫಲಿತಾಂಶ | ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಜೆಇಇ ಮೈನ್ಸ್ ಫಲಿತಾಂಶ | ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

February 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL