ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆ ರಜೆಯಲ್ಲಿ #Summer Holiday ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ #South Western Railway ವತಿಯಿಂದ ಬೆಂಗಳೂರು ಹಾಗೂ ಕಲಬುರಗಿ ನಡುವೆ ವಿಶೇಷ 30 ಟ್ರಿಪ್ ರೈಲು ಸಂಚಾರವನ್ನು ನಡೆಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಹಾಗೂ ಕಲಬುರಗಿಯ ನಡುವೆ ಪ್ರತಿಕಡೆಯಿಂದ 30 ಟ್ರಿಪ್ ವಿಶೇಷ ರೈಲು #Special Train ಸಂಚಾರವನ್ನು ನಡೆಸಲಿದೆ.
06519 ಸಂಖ್ಯೆಯ ವಿಶೇಷ ರೈಲಯ ಎಸ್’ಎಂವಿಟಿ ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ಎಕ್ಸ್’ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡಲಿದ್ದು ಮರುದಿನ ಬೆಳಿಗ್ಗೆ 07.40ಕ್ಕೆ ಕಲಬುರಗಿಯನ್ನು ತಲುಪಲಿದೆ:
ಯಾವೆಲ್ಲಾ ದಿನಾಂಕದಂದು ಸಂಚಾರ?
ಏಪ್ರಿಲ್: 4,5, 6, 11, 12, 13, 18, 19, 20, 25, 26, ಮತ್ತು 27
ಮೇ: 2, 3, 4, 9, 10, 11, 16, 17, 18, 23, 24ಮತ್ತು 25
ಜೂನ್: 6, 7, 8, 13, 14, ಮತ್ತು 15
06520 ಸಂಖ್ಯೆಯ ವಿಶೇಷ ರೈಲು ರೈಲುಸಂಖ್ಯೆ ಕಲಬುರಗಿ- ಎಸ್’ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್’ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಬೆಳಿಗ್ಗೆ 09.35 ಗಂಟೆಗೆ ಕಲಬುರಗಿಯಿಂದ ಹೊರಡಲಿದ್ದು ಅದೇ ದಿನರಾತ್ರಿ 8 ಗಂಟೆಗೆ ಎಸ್’ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ:
Also read: ಬ್ರಹ್ಮ ಬಂದರೂ ಶಿವಮೊಗ್ಗದ ಈ ಮೈದಾನವನ್ನು ಮುಸ್ಲಿಮರಿಗೆ ಬಿಟ್ಟುಕೊಡಲ್ಲ | ಈಶ್ವರಪ್ಪ ಖಡಕ್ ನುಡಿ
ಏಪ್ರಿಲ್: 5, 6, 7, 12, 13, 14, 19, 20, 21, 26, 27 ಮತ್ತು 28
ಮೇ: 3, 4, 5, 10, 11, 12, 17, 18, 19, 24, 25 ಮತ್ತು 26
ಜೂನ್: 7, 8,9, 14, 15 ಮತ್ತು 16
ಈ ರೈಲುಗಳಿಗೆ ಯಲಹಂಕ, ಧರ್ಮವರಂ, ಅನಂತಪುರಂ, ಗುಂತಕಲ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ.
ಈ ರೈಲು ಒಂದು ಎಸಿ 2-ಟಯರ್ ಕೋಚ್, ಒಂದು ಎಸಿ 3-ಟಯರ್ ಕೋಚ್, ಹನ್ನೊಂದು ಸ್ಲೀಪರ್ ದರ್ಜೆಯ ಕೋಚ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆಯ ಕೋಚ್ ಮತ್ತು ಎರಡು ಎಸ್’ಎಲ್’ಆರ್’ಡಿ ಕೋಚ್’ಗಳನ್ನು ಹೊಂದಿರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post