ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಬ್ಬರು ಕೈಯ್ಯಲ್ಲಿ ಲಾಂಗ್ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಅದಕ್ಕೆ ಕನ್ನಡದ ರಾಮಾಚಾರಿ ಹಾಡನ್ನ ಹಾಕಿರುವ ಹಿನ್ನೆಲೆಯಲ್ಲಿ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.,
ಇದು ಸಾರ್ವಜನಿಕರ ಶಾಂತಿಗೆ ದಕ್ಕೆ ಉಂಟು ಮಾಡುವ ವಿಡಿಯೋ ಎಂದು ಸುಮೋಟೊ ದಾಖಲಾಗಿದೆ.
ಫೈಜಾನ್ ಎಂಬುವನು ಕಾರಿನಲ್ಲಿ ಕುಳಿತು ಕೊಂಡು ಉದ್ದನೆಯ ಭರ್ಜಿ ಹಿಡಿದು ಕುಳಿತಿದ್ದು ಅದಕ್ಕೆ ಕನ್ನಡ ಸಿನಿಮಾದ ರಾಮಾಚಾರಿ ಹಾಡನ್ನ ಹಾಕಿ ಭಯ ಹುಟ್ಟಿಸುವ ರೀತಿಯಲ್ಲಿ ಮೊಮದ್ ಶಾಬಾದ್ ಎಂಬಾತ ಇನ್ ಸ್ಟಾಗ್ರಾಮ್ ನಲ್ಲಿ ಹರಿ ಬಿಟ್ಟಿದ್ದನು. ಈ 14 ಸೆಕೆಂಡ್ ವಿಡಿಯೋ ವಿರುದ್ಧ ಮತ್ತು ಫೈಜಾನ್ ಮತ್ತು ಮೊಹಮದ್ ಶಾಬಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post