ಕಲ್ಪ ಮೀಡಿಯಾ ಹೌಸ್ | ಮುಂಬೈ |
`ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ #House Arrest Reality Show ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿರುವ ಆರೋಪದ ಮೇಲೆ ನಟ ಅಜಾಜ್ ಖಾನ್ #Azaz Khan ಮತ್ತು ULLU ಆ್ಯಪ್‌ನ ಮಾಲೀಕ ವಿಭು ಅಗರ್ವಾಲ್ #Vibhu Agarwal of ULLU App ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಜಿ ʻಬಿಗ್ ಬಾಸ್’ ಸ್ಪರ್ಧಿಯಾಗಿರುವ ಖಾನ್ ನಡೆಸಿಕೊಡುವ ವೆಬ್ ಶೋನ ಕ್ಲಿಪ್ ಇತ್ತೀಚೆಗೆ ವೈರಲ್ ಆಗಿತ್ತು. ಇದರಲ್ಲಿ ಸ್ಪರ್ಧಿಗಳಿಗೆ ಲೈಂಗಿಕ ಭಂಗಿಗಳಲ್ಲಿ ನಟಿಸುವಂತೆ ಒತ್ತಾಯಿಸಿ ಚಿತ್ರೀಕರಿಸಲಾಗಿತ್ತು. ಈ ಸಂಬಂಧ ಬಜರಂಗ ದಳದ ಕಾರ್ಯಕರ್ತರೊಬ್ಬರ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಸಭ್ಯ ಪ್ರಶ್ನೆಗಳನ್ನು ಕೇಳುತ್ತಿರುವುದು ಸಹ ವೀಡಿಯೋ ಕ್ಲಿಪ್‌ನಲ್ಲಿ ಸೆರೆಯಾಗಿತ್ತು. ಈ ವೇಳೆ ಸ್ಪರ್ಧಿಗಳು ಮುಜುಗರ ಅನುಭವಿಸಿದ್ದರು. ಅಲ್ಲದೇ ವಿವಾದದ ಬಳಿಕ ಈ ಕ್ಲಿಪ್‌ನ್ನು ಸ್ಟ್ರೀಮಿಂಗ್‌ನಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹಲವಾರು ಬಾರಿ ಖಾನ್ ಅತ್ಯಾಚಾರ ಎಸಗಿದ್ದಾರೆ ಎಂದು 30 ವರ್ಷದ ಮಹಿಳೆಯೊಬ್ಬಳು ಆರೋಪಿಸಿ ದೂರು ನೀಡಿದ್ದಾಳೆ. ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post