ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡೆಂಗ್ಯೂ ಮತ್ತು ಚಿಕನ್ ಗುನ್ಯಾ ರೋಗಗಳು ಹೆಚ್ಚಾಗಿ ವರದಿಯಾಗುತ್ತಿವೆ ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿಗಳು, ಟೈರ್‍ಗಳು, ಬ್ಯಾರೆಲ್‍ಗಳು ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೇಂಗ್ಯೂ #Dengue ಮತ್ತು ಚಿಕನ್ ಗುನ್ಯಾ #Chickengunya ಹರಡುವ ಸೊಳ್ಳೆಗಳ ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿವೆ ಆದ್ದರಿಂದ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ಕೆ.ಎಸ್. ನಟರಾಜ ಅವರು ಅಭಿಪ್ರಾಯ ಪಟ್ಟರು.
ಅವರು ಇಂದು ರಾಷ್ಟ್ರೀಯ ಡೇಂಗ್ಯೂ ದಿನಾಚರಣೆಯ ಅಂಗವಾಗಿ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಜನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಡೆಂಗಿ ನಿಯಂತ್ರಣ ಪ್ರತಿಯೊಬ್ಬನ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತ ಇರುವ ನೀರಿನ ಸಂಗ್ರಹಗಳನ್ನು ಸ್ವಚ್ಛಗೊಳಿಸಿ ಮುಚ್ಚಿಡುವ ಮುಖಾಂತರ ಡೆಂಗ್ಯೂ ನಿಯಂತ್ರಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಆಶ್ರಿತ ರೋಗವಾಹಕ ರೋಗಗಳ ನಿಯಂತ್ರಣ ಅಧಿಕಾರಿ ಡಾಕ್ಟರ್ ಗುಡದಪ್ಪ ಕಸಬಿಯವರು ಮಾತನಾಡಿ ಡೆಂಗಿ ರೋಗವು ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು ಈಡೀಸ್ ಈಜಿಪ್ಟ್ ಎಂಬ ಹೆಣ್ಣ ಸೊಳ್ಳೆ ಕಚ್ಚುವುದರ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈಡೀಸ್ ಈಜಿಪ್ಟ್ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಯಾಗಿದ್ದು ಮನೆಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಗ್ರಹವಾಗುವ ನೀರಿನ ಮೂಲಗಳನ್ನು ಪರಿಶೀಲಿಸಿ ಸ್ವಚ್ಛಗೊಳಿ ಸುವ ಮುಖಾಂತರ ಡೆಂಗಿ ನಿಯಂತ್ರಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಈ ಜಾಗೃತಿ ಜಾತದಲ್ಲಿ ಬೆಂಗಳೂರಿನ ಜಂಟಿ ನಿರ್ದೇಶಕರ ಕಚೇರಿಯ ವೀಕ್ಷಕರಾಗಿ ಆಗಮಿಸಿದ ದಯಾನಂದ್‍ರವರು ಮಾತನಾಡುತ್ತಾ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದರ ಮುಖಾಂತರ ಡೆಂಗಿ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ಆಯುರ್ವೇದಿಕ್ ಕಾಲೇಜಿನ ಅಧ್ಯಕ್ಷ ಎಂವಿಪಿ ಆರಾಧ್ಯ ಅವರು ವಹಿಸಿ ಮಾತನಾಡಿದರು. ನಾರಾಯಣ್, ತಿಪ್ಪೇಸ್ವಾಮಿ, ಯಜುರ್ವೇದ, ಬಾಪೂಜಿ ವಿದ್ಯಾ ಸಂಸ್ಥೆಯ ಪಂಕಜ್ ಪ್ರಸಾದ್, ಡಾಕ್ಟರ್ ಕವಿತಾ, ಡಾಕ್ಟರ್ ಶೀಲಾ, ಡಾಕ್ಟರ್ ಸ್ವಾತಿ, ರೋಟರಿ ಶಿವಮೊಗ್ಗ ಮಲೆನಾಡು ಕ್ಲಬ್ಬಿನ ಅಧ್ಯಕ್ಷ ಮುಕ್ತ ಆಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಡಾಕ್ಟರ್ ಚಂದ್ರಶೇಖರ್ ಕಾರ್ಯಕರ್ತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಗೃತಿ ಜಾತಾವು ಆಯುರ್ವೇದ ಕಾಲೇಜಿನಿಂದ ಮುಖ್ಯ ರಸ್ತೆಯಲ್ಲಿ ತೆರಳಿ ನವುಲೇ ಹಾಗೂ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















