ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವ ಸೈಕಲ್ ದಿನಾಚರಣೆ #World Bicycle Day ಅಂಗವಾಗಿ ಪರಿಸರ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಆಯೋಜಿಸಿದ್ದ ಸೈಕಲ್ ಜಾಥಾ ಯಶಸ್ವಿಯಾಯಿತು.
ಚಾಮುಂಡಿ ಕ್ಲಬ್’ನಿಂದ ಪ್ರಾರಂಭವಾದ ಜಾಥಾದಲ್ಲಿ ವಿಭಾಗದ ಶಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಉತ್ಸಾಹಭರಿತವಾಗಿ ಭಾಗವಹಿಸಿದರು.
ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಸ್ವತಃ ಜಾಥಾದಲ್ಲಿ ಭಾಗವಹಿಸಿ, ಸಿಬ್ಬಂದಿಗೆ ಪ್ರೇರಣೆಯಾದರು ಹಾಗೂ ಮುನ್ನಡೆಸಿ ಉತ್ತೇಜನ ನೀಡಿದರು.
ಚಾಮುಂಡಿ ಕ್ಲಬ್’ನಿಂದ ಆರಂಭವಾದ ಜಾಥಾ ಮೈಸೂರು ರೈಲು ನಿಲ್ದಾಣ, ಅಶೋಕ ರಸ್ತೆ, ಅರಮನೆ ಸರ್ಕಲ್, ಕೆ.ಆರ್. ಸರ್ಕಲ್, ದೇವರಾಜ್ ಅರಸ್ ರಸ್ತೆ, ಹಾಗೂ ಮೈಸೂರು ರೈಲು ನಿಲ್ದಾಣದಲ್ಲಿ ಸಮಾಪ್ತಿಯಾಯಿತು.
ಎಡಿಆರ್’ಎಂ ಮೈಸೂರು ವಿನಾಯಕ ರಾ ನಾಯಕ, ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದರು. ಈ ಜಾಥಾಕ್ಕೆ ಉತ್ತಮ ಪ್ರತಿಸ್ಪಂದನೆ ದೊರೆತಿದ್ದು, ಪರಿಸರ ಸ್ನೇಹಿ ಕ್ರಮಗಳು ಮತ್ತು ದೈನಂದಿನ ಜೀವನದಲ್ಲಿ ಸದೃಢತೆ ಅಗತ್ಯವಿದೆ ಎಂಬುದನ್ನು ತೋರ್ಪಡಿಸಿದರು. ಇದು ವಿಭಾಗದ ಸಸ್ಥಿರತೆಯ ಕುರಿತ ನಿಷ್ಠೆ, ಸಾರ್ವಜನಿಕ ಸಂಪರ್ಕ ಮತ್ತು ಆರೋಗ್ಯಕರ ಭವಿಷ್ಯದತ್ತದ ಬದ್ಧತೆಯನ್ನೂ ಪ್ರತಿಬಿಂಬಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















