ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ #RCB Victory Celebration 11 ಜನ ಮೃತಪಟ್ಟಿದ್ದು ದುರದೃಷ್ಟಕರ, ಮೃತರ ಕುಟುಂಬಗಳಿಗೆ ಆರ್ ಸಿಬಿ ತಂಡ ಕೂಡ ಪರಿಹಾರ ಕೊಡಬೇಕು ಎಂದು ಶಾಸಕರಾದ ಮಂಡ್ಯದ ದಿನೇಶ ಗೂಳಿಗೌಡ ಹಾಗೂ ಬೀದರ್ ನ ಭೀಮರಾವ್ ಪಾಟೀಲ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಐಪಿಎಲ್ ಫೈನಲ್ ನಲ್ಲಿ ವಿಜಯಿಯಾಗಿರುವ ಆರ್ ಸಿಬಿ ತಂಡವನ್ನು ನೋಡಲು, ಅವರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಮಂಗಳವಾರ ರಾತ್ರಿಯೇ ರಾಜ್ಯದ ಮೂಲೆ, ಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದರು. ಬುಧವಾರ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದಾರೆ.
ಆರ್ ಸಿಬಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದೆ. ಐಪಿಎಲ್ ಗೆಲುವಿನಿಂದ ಕೋಟ್ಯಾಂತರ ಹಣ ಗಳಿಸಿದೆ. ಅಭಿಮಾನಿವಳ ರಕ್ಷಣೆ ಅವರದ್ದೂ ಜವಾಬ್ದಾರಿ. ಆದರೆ ಆರ್ ಸಿಬಿಯಾಗಲಿ ಅಥವಾ ಕೆಸಿಎ ಆಗಲಿ ಯಾವುದೇ ಪರಿಹಾರ ಘೋಷಿಸಿಲ್ಲ. ಇಂಥ ದುರಂತದ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಶಾಸಕದ್ವಯರು ಒತ್ತಾಯ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post