ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪನವರು #K S Eshwarappa ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ #CM Siddaramaiah ಬಹಿರಂಗ ಪತ್ರ ಬರೆದಿದ್ದು, ಕೂಡಲೇ ಜಾತಿಗಣತಿ ವರದಿ ಜಾರಿಗೆ ತನ್ನಿ ಇಲ್ಲವಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಇಂದು ಅವರ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013-18ರ ಅವಧಿಯ ಸರ್ಕಾರದಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿ ನಾನು ಆಗ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ, ಕಾಂತ್‍ರಾಜ್ ವರದಿ ಜಾರಿಗೆ ಒತ್ತಾಯಿಸಿದಾಗ ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್. ಆಂಜನೇಯ ಅವರು ಜಾತಿಗಣತಿ ವರದಿಯನ್ನು ಮಂಡಿಸುವುದಾಗಿ ಒಪ್ಪಿಕೊಂಡಿದ್ದರು. ಮುಖ್ಯಮಂತ್ರಿಗಳೇ ಮೇಲ್ಮನೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ನಾನು ಹಠ ಹಿಡಿದಾಗ, ಪರಿಷತ್ತಿಗೇ ಬಂದು ವರದಿ ಮಂಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ವರದಿ ಬಂದು 10 ವರ್ಷವಾದರೂ ಇನ್ನೂ ಜಾರಿಗೆ ತಂದಿಲ್ಲ. ನಿಮ್ಮ ಸ್ಥಾನ ಉಳಿಸುವುದಕ್ಕಾಗಿ ರಾಜಕೀಯ ಸ್ವಾರ್ಥಕ್ಕೆ ಈ ವರದಿಯನ್ನು ಬಳಸಿಕೊಂಡರೇ ವಿನಃ, ದಲಿತರ ಉದ್ಧಾರಕನೆಂದು ಹೇಳಿಕೊಂಡು ಬಂದಿರುವ ನೀವು ಆ ವರ್ಗಕ್ಕೆ ಅಮೂಲ್ಯವಾದ ಕೊಡುಗೆ ನೀಡಬಹುದಾಗಿದ್ದ ಈ ಜಾತಿಗಣತಿ ವರದಿಯನ್ನು ಮಂಡಿಸದೆ ಸದನದಲ್ಲೂ ಚರ್ಚೆಯನ್ನೂ ಮಾಡದೇ, ಜಾರಿಗೆ ತರದೇ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಈಗ ಇನ್ನೂ 90 ದಿನಗಳ ಕಾಲ ಮುಂದೂಡಿ ಪರಿಷ್ಕøತ ಸಮೀಕ್ಷೆಯ ನೆಪದಲ್ಲಿ ಹಿಂದುಳಿದ ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದರೀರಿ. ನಿಮ್ಮ ಮಗ ಡಾ. ಯತೀಂದ್ರ ಅವರು ಮೇಲ್ವರ್ಗದ ಒತ್ತಡಕ್ಕೆ ಮಣಿದು ಈ ವರದಿ ಜಾರಿಯಾಗಿಲ್ಲ ಎಂಬು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆ.ಈ. ಕಾಂತೇಶ್, ಎಂ. ಶಂಕರ್, ಈ. ವಿಶ್ವಾಸ್, ಸುವರ್ಣಾಶಂಕರ್, ಸುನೀತಾ ನಾಗರಾಜ್, ಬಾಲು, ವಿಷ್ಣು, ರಾಜಾರಾಮ್ ಭಟ್, ಅನಿತಾ ಶಿವಾಜಿ, ಜಾದವ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post