ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜುಲೈ 1 ರಿಂದ ಸುಮಾರು 13,000 ದೈನಂದಿನ ಎಸಿ ಅಲ್ಲದ ಮೇಲ್ ಮತ್ತು ಎಕ್ಸ್'ಪ್ರೆಸ್ ರೈಲುಗಳ ಪ್ರಯಾಣ ದರದಲ್ಲಿ ಕಿಲೋಮೀಟರಿಗೆ 2 ಪೈಸೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರೈಲ್ವೆ ಹಲವಾರು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಯಾಣಿಕರ ರೈಲು ದರದಲ್ಲಿ ಏರಿಕೆ ಮಾಡಲು ಸಜ್ಜಾಗಿದ್ದು, ಪರಿಷ್ಕೃತ ದರಗಳು ಜುಲೈ 1 ರಿಂದ ಜಾರಿಗೆ ಬರಲಿವೆ.
ಈ ಕುರಿತಂತೆ ವರದಿಯಾಗಿದ್ದು, ಇದರನ್ವಯ ಎಸಿ ಅಲ್ಲದ ಮೇಲ್ ಮತ್ತು ಎಕ್ಸ್’ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಕಿಲೋಮೀಟರಿಗೆ 1 ಪೈಸೆ ಏರಿಕೆಯನ್ನು ಪಾವತಿಸಬೇಕಿದೆ.
ದೇಶದಾದ್ಯಂತ ಸುಮಾರು 13,000 ದೈನಂದಿನ ಎಸಿ ಅಲ್ಲದ ಮೇಲ್ ಮತ್ತು ಎಕ್ಸ್’ಪ್ರೆಸ್ ರೈಲುಗಳ ಟಿಕೆಟ್ ದರದಲ್ಲಿ ಅಲ್ಪ ಏರಿಕೆಯಾಗಲಿದೆ. ಎಸಿ ವರ್ಗದ ಪ್ರಯಾಣಿಕರಿಗೆ, ದರದಲ್ಲಿ ಏರಿಕೆ ಪ್ರತಿ ಕಿಲೋಮೀಟರಿಗೆ 2 ಪೈಸೆ ಇರುತ್ತದೆ ಎಂದು ವರದಿಯಾಗಿದೆ.

ಹೆಚ್ಚುವರಿಯಾಗಿ, ಸಾಮಾನ್ಯ ಎರಡನೇ ದರ್ಜೆಯಲ್ಲಿ 500 ಕಿಮೀ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ದರ ಹೆಚ್ಚಳವಿಲ್ಲ. ಆದಾಗ್ಯೂ, ಸಾಮಾನ್ಯ ಎರಡನೇ ದರ್ಜೆಯಲ್ಲಿ 500 ಕಿಮೀ ಮೀರಿದ ಪ್ರಯಾಣಕ್ಕೆ, ದರವು ಪ್ರತಿ ಕಿಲೋಮೀಟರ್’ಗೆ ಅರ್ಧ ಪೈಸೆ ಮಾತ್ರ ಹೆಚ್ಚಾಗುತ್ತದೆ. ಉದಾಹರಣೆಗೆ, 600 ಕಿಮೀ ಪ್ರಯಾಣವು ಕೇವಲ 50 ಪೈಸೆಯ ಹೆಚ್ಚಳವನ್ನು ಕಾಣಲಿದೆ. ಇದು ಹೆಚ್ಚಳವೇ ಆದರೂ, ಕನಿಷ್ಠ ಹೊರೆ ಎಂದು ಇಲಾಖೆ ಪರಿಗಣಿಸಿದೆ.
ಇನ್ನು, ಇದೇ ವೇಳೆ ಜುಲೈ 1ರಿಂದ ತತ್ಕಾಲ್ ಟಿಕೇಟ್’ಗಳನ್ನು ಕಾಯ್ದಿರಿಸಲು ಪ್ರಯಾಣಿಖರು ಆಧಾರ್ ದೃಢೀಕರಣಗೊಳಿಸುವುದನ್ನು ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ.
ಭಾರತೀಯ ರೈಲ್ವೆಯ ಅಧಿಸೂಚನೆಯ ಪ್ರಕಾರ, ಜುಲೈ 1, 2025 ರಿಂದ, ತತ್ಕಾಲ್ ಟಿಕೇಟ್’ಗಳು ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಿದ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತವೆ. ಬುಕಿಂಗ್’ಗಳನ್ನು ಅಧಿಕೃತ ಐಆರ್’ಸಿಟಿಸಿ ವೆಬ್’ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಮಾತ್ರ ಮಾಡಬಹುದು.
ಅಲ್ಲದೇ, ಜುಲೈ 15ರಿಂದ, ಹೆಚ್ಚುವರಿ ಭದ್ರತೆಯನ್ನು ಸೇರಿಸಲಾಗುತ್ತಿದೆ. ಪ್ರಯಾಣಿಕರು ಆಧಾರ್ ಆಧರಿಸಿ ಒಟಿಪಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಬುಕಿಂಗ್ ಸಮಯದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಮುಂದುವರಿಯಲು ಅದನ್ನು ನಮೂದಿಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post