ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-28 |

ನಮ್ಮ ಸನಾತನ ಪರಂಪರೆ ಅತ್ಯಂತ ವಿಶಾಲವೂ, ವೈಜ್ಞಾನಿಕವೂ, ಶ್ರೀಮಂತವೂ, ಧರ‍್ಮಿಕವೂ ಆದ ದೃಢ ಪರಂಪರೆಯಾಗಿದೆ. ಆ ಕಾರಣದಿಂದಲೇ ಅನೇಕರಿಂದ ಎಷ್ಟೋ ಬಾರಿ ದಾಳಿಗೊಳಗಾದರೂ ನಶಿಸದೆ ಸ್ಥಿರವಾಗಿ ಉಳಿದ ಪರಂಪರೆ ನಮ್ಮದಾಗಿದೆ. ಇಂತಹ ಶ್ರೇಷ್ಠ ಪರಂಪರೆಯ ವಾಹಕರೇ ನಮ್ಮ ಹಿರಿಯರು. ಕುಟುಂಬದಲ್ಲಿ ಬೇರಿನ ರೂಪದಲ್ಲಿ ನಿಂತು ಹೊಸ ಚಿಗುರುಗಳಿಗೆ ಪರಂಪರೆಯ ಗುಟುಕೆರೆಯುವ ಹಿರಿಯರು ಪರಂಪರಾ ಬೀಜರಕ್ಷೆಯ ಕೊಂಡಿಗಳಾಗಿದ್ದಾರೆ.
ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಕ್ಕಳು ಇವರೆಲ್ಲರೂ ಸೇರಿ ಬಾಳಿದರೆ ಅದು ಒಂದು ಒಟ್ಟು ಕುಟುಂಬ ಎನಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಅಪ್ಪ-ಅಮ್ಮಂದಿರು ಗೃಹಸ್ಥಿಯನ್ನು ಸಂಭಾಳಿಸುವ ಜವಾಬ್ದಾರಿಯನ್ನು ಹೊತ್ತರೆ, ಗೃಹಸ್ಥಿಯ ಜವಾಬ್ದಾರಿಯಿಂದ ಮುಕ್ತರಾದ ಹಿರಿಯರು ಮಕ್ಕಳನ್ನು ನೋಡಿಕೊಳ್ಳುವರು. ಅಜ್ಜಿ-ತಾತ ಮತ್ತು ಮೊಮ್ಮಕ್ಕಳ ಪ್ರೀತಿ ಹೇಳತೀರದ್ದು. ಅವರು ಮಕ್ಕಳ ಪರ ನಿಂತು, ಅವರಿಗೆ ಬೆಂಬಲ ನೀಡುತ್ತಾರೆ. ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಒಂದು ವ್ಯಕ್ತಿತ್ವವನ್ನು ಸೃಷ್ಟಿಸುತ್ತಾರೆ.

ನಾಲ್ಕು ಆಶ್ರಮಗಳಲ್ಲಿ ‘ವಾನಪ್ರಸ್ಥ’ವೂ ಒಂದು. ಅದು ಮನುಷ್ಯನ ಬೆಳವಣಿಗೆಯ ಒಂದು ಹಂತವೇ ಆಗಿದೆ. ಜೀವನದ ಎಲ್ಲ ದಾಯಿತ್ವಗಳನ್ನು ನಿಭಾಯಿಸಿ, ತನ್ನ ಆಧ್ಯಾತ್ಮ ಸಾಧನೆಯತ್ತ ತೆರಳುವ ಅತಿ ಮುಖ್ಯವಾದ ಜೀವನಾವಧಿ. ಇಲ್ಲಿ ಆಸೆ ಆಕಾಂಕ್ಷೆಗಳನ್ನು ಮೀರಿ, ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡು, ದಾನ ರ‍್ಮಗಳನ್ನಾಚರಿಸುತ್ತಾ, ವಿಶೇಷವಾಗಿ ಸೇವೆಯಲ್ಲಿ ತೊಡಗಿ ಆ ಮೂಲಕ ಸಮಾಜದ ಭದ್ರ ಬುನಾದಿಗೆ ಕೊಡುಗೆ ನೀಡುವ ಹಂತವೇ ಇದಾಗಿದೆ. ಅನುಭವಿಗಳಾದ ಇವರು ಅನನುಭವಿಗಳಾದ ತಮ್ಮ ನಂತರದ ಪೀಳಿಗೆಗೆ ಮರ‍್ಗ ರ‍್ಶನವನ್ನು ಮಾಡುತ್ತಾರೆ. ತಮ್ಮ ಕುಲ ಪರಂಪರೆ, ನಾಡಿನ ಪರಂಪರೆ, ದೇಶದ ಪರಂಪರೆಗಳನ್ನೊಳಗೊಂಡಂತೆ ಇವರ ಅನುಭವ ಸೇತುವೆಯಾಗಿ ಯುವಪೀಳಿಗೆಯನ್ನು ಬೆಸೆಯುತ್ತದೆ ಎಂದರೆ ತಪ್ಪಾಗಲಾರದು. 
ಜೇನಿನ ಗೂಡಿನಂತೆ ಒಟ್ಟಿಗೆ ಬಾಳಿ ಜೀವನವನ್ನು ಸಂತೋಷದಿಂದ ಸಂಭ್ರಮಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post