ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ದಾಟುವ ಕಾಮಗಾರಿ ಹೊನ್ನವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಹಲವು ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ ಪಡಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ರೈಲುಗಳ ತಾತ್ಕಾಲಿಕ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ ಮಾಡಲಾಗಿದ್ದು, ವಿವರ ಇಂತಿವೆ.
ರೈಲುಗಳ ಮಾರ್ಗ ಬದಲಾವಣೆ:
- ಜುಲೈ 3, 10, 17, 24 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 18111 ಟಾಟಾನಗರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು, ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣಾವರ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಈ ಪ್ರಯಾಣದಲ್ಲಿ ಈ ರೈಲು ತುಮಕೂರಿಗೆ ನಿಲುಗಡೆ ಇರುವುದಿಲ್ಲ.
- ಜುಲೈ 8, 15, 22 ರಂದು ಬನಾರಸ್ನಿಂದ ಹೊರಡುವ ರೈಲು ಸಂಖ್ಯೆ 07324 ಬನಾರಸ್ – ಎಸ್’ಎಸ್’ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಯಲಹಂಕ, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರಿಗೆ ನಿಲುಗಡೆ ಇರುವುದಿಲ್ಲ.
- ಜುಲೈ 4, 7, 9, 11, 14, 16, 18, 21, 23, 25 ರಂದು ವಾಸ್ಕೋ ಡ ಗಾಮದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ – ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಇದು ತಿಪಟೂರು ಮತ್ತು ತುಮಕೂರಿಗೆ ನಿಲುಗಡೆ ಇರುವುದಿಲ್ಲ.
- ಜುಲೈ 5, 8, 10, 12, 15, 17, 19, 22, 24, 26 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್ ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಇದು ತಿಪಟೂರು ಮತ್ತು ತುಮಕೂರಿಗೆ ನಿಲುಗಡೆ ಇರುವುದಿಲ್ಲ.
ರೈಲುಗಳ ನಿಯಂತ್ರಣ:
- ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 12726 ಧಾರವಾಡ-ಕೆಎಸ್’ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 66577 ತುಮಕೂರು-ಶಿವಮೊಗ್ಗ ಟೌನ್ ಮೆಮು ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲಿನ ಮರುನಿಗದಿ:
- ರೈಲು ಸಂಖ್ಯೆ 56224 ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಜುಲೈ 5, 8, 10, 12, 15, 17, 19, 22, 24, 26 ರಂದು ಅರಸೀಕೆರೆಯಿಂದ 60 ನಿಮಿಷ ತಡವಾಗಿ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post