ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಇದೇ ಜು.14ರಂದು ಸೇತುವೆ ಲೋಕಾರ್ಪಣೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಸೇತುವೆಗೆ ಯಾರ ಹೆಸರು?
ಶ್ರೀಕ್ಷೇತ್ರ ಸಿಗಂಧೂರು ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ತೆರಳುವ ಭಕ್ತರು ಶರಾವತಿ ನದಿಯನ್ನು ಲಾಂಚ್ ಮೂಲಕ ತೆರಳಬೇಕಿತ್ತು.
ಸಾರ್ವಜನಿಕರಿಗೆ ಭಕ್ತರಿಗೆ ಅನುಕೂಲವಾಗಲು ದೇಶದ ಅತಿ ಉದ್ದದ ತೂಗು ಸೇತುವೆ ನಿರ್ಮಾಣವಾಗಿದ್ದು ಇದೇ ಜು.14ರಂದು ಲೋಕಾರ್ಪಣೆಯಾಗಲಿದೆ.
ಐತಿಹಾಸಿಕ ಸೇತುವೆಗೆ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಸಂಸದ ರಾಘವೇಂದ್ರ ಪ್ರಸ್ತಾಪ ಮಾಡಿದ್ದಾರೆ.
ಸೇತುವೆಗೆ ಸಿಗಂಧೂರು ಚೌಡೇಶ್ವರಿ ಸೇತುವೆ ಹೆಸರು ಅಂಕಿತ ಮಾಡಲು ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ ಮಾಡಿದ್ದು ಇದಕ್ಕೆ ಬೇಕಾದ ಕ್ಲಿಯರೆನ್ಸ್ ರಾಜ್ಯ ಸರ್ಕಾರ ಬೇಗನೆ ನೀಡಲಿ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post