ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಸೀದಿಗಳನ್ನು ಆಜಾನ್ ಕೂಗುವಾಗ #Azan in Mosque ಉಂಟಾಗಬಹುದಾದ ಅತಿಯಾದ ಶಬ್ದಮಾಲಿನ್ಯವನ್ನು#Noise Pollution ನಿಯಂತ್ರಿಸುವ ಅಗತ್ಯವಿದ್ದು, ಇದಕ್ಕಾಗಿ ಇರುವ ತಂತ್ರಾಂಶವನ್ನು ಬಳಸಲು ಮಸೀದಿಗಳಿಗೆ ಸೂಚನೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇದರ ಬಗ್ಗೆ ವಿವರಿಸಿದರು.
ತಮಿಳುನಾಡಿನ ಕೆಲವು ಐಟಿ ತಂತ್ರಜ್ಞರು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಅಲ್ಲಿನ ಕೆಲವು ಮಸೀದಿಗಳು ಇದನ್ನು ಯಶಸ್ವಿಯಾಗಿ ಬಳಸುತ್ತಿವೆ. ಈ ಅಪ್ಲಿಕೇಶನ್ ಬಳಸುತ್ತಿರುವ ಮಹೀಮ್ ಜುಮಾ ಮಸೀದಿಯ ಫಹಾದ್ ಖಲೀಲ್ ಪಠಾಣ್ ಅವರ ಪ್ರಕಾರ, ಅಜಾನ್ ಶುರುವಾಗುವಾಗ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿರುವವರ ಮೊಬೈಲ್’ಗೆ ಸಂದೇಶ ಹೋಗುತ್ತದೆ. ಅದನ್ನು ತೆರೆದು ಕ್ಲಿಕ್ ಮಾಡಿದಾಗ ಅವರಿಗೆ ಮಾತ್ರ ಅಜಾನ್ ಕೇಳಿಸುತ್ತದೆ. ಇದರಿಂದ ಸುತ್ತಮುತ್ತಲಿನ ಸಮುದಾಯದ ಜನರಿಗೆ ನೇರವಾಗಿ ಅಜಾನ್ ಕೇಳಿಸುವ ಮೂಲಕ ಅತಿಯಾದ ಶಬ್ದಮಾಲಿನ್ಯ ಉಂಟಾಗುವುದಿಲ್ಲ ಮತ್ತು ಜನರಿಗೆ ತೊಂದರೆಯಾಗುವುದಿಲ್ಲ ಎಂದು ವಿವರಿಸಿದರು.
ಸುಪ್ರೀಂ ಕೋರ್ಟ್ #Supreme Court ಶಬ್ದಮಾಲಿನ್ಯ ತಡೆಯಲು ಧ್ವನಿವರ್ಧಕಗಳ ಶಬ್ದದ ಮಿತಿಯನ್ನು ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಎಂದು ಆದೇಶಿಸಿದೆ. ಆದರೂ, ಕೆಲವು ಮಸೀದಿಗಳಲ್ಲಿ ಈ ಮಿತಿಗಳನ್ನು ಮೀರಿ ಅಜಾನ್ ಕೂಗಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದರು.
ಮಹಾರಾಷ್ಟ್ರದಲ್ಲಿ ಶಬ್ದಮಾಲಿನ್ಯದ ವಿರುದ್ಧ ನಡೆದ ಹೋರಾಟದಲ್ಲಿ 1500ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದ್ದರೂ, ಅಜಾನ್ ಶಬ್ದದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಹೊಸದಾಗಿ ಬಿಡುಗಡೆಯಾಗಿರುವ ಉಚಿತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಶಬ್ದಮಾಲಿನ್ಯವನ್ನು ತಡೆಯಬಹುದು ಎಂದರು.
ದೇಶದಾದ್ಯಂತ ಅನೇಕ ರಾಜ್ಯಗಳು ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುತ್ತಿವೆ. ಆದರೆ ಕರ್ನಾಟಕದಲ್ಲಿ ಇದು ಇನ್ನೂ ಜಾರಿಗೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಅಪ್ಲಿಕೇಶನ್ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅದನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಇದರಿಂದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post