ಕಲ್ಪ ಮೀಡಿಯಾ ಹೌಸ್ | ಸೊರಬ |
ಈ ಭೂಮಿಯ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ, ಬದುಕು ಕಸಿಯುವ ಕ್ರಿಯೆ ವಿಕೃತ ಮನಸ್ಸಿನ ಇನ್ನೊಂದು ಮುಖ ಎಂದು ಪರಿಸರ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಆಯೋಜಿಸಿದ್ದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರಾಮಪತ್ರೆ ಜಡ್ಡಿಯ ವೈಶಿಷ್ಟ್ಯತೆ, ಉರಗ ಪ್ರಬೇಧಗಳ ಪರಿಚಯ ಹಾಗೂ ಪ್ರಕೃತಿಯಲ್ಲಿ ಅವುಗಳ ಪಾತ್ರ ಕುರಿತು ಮಾತನಾಡಿದರು.
ಸೊರಬ ತಾಲ್ಲೂಕಿನ ವಿಶಿಷ್ಟ ಕಾನಿನ ಮಹತ್ವ ಇಲ್ಲಿನವರಾದ ನಮಗೆ ತಿಳಿದಿಲ್ಲ. ಆದರೆ, ಇದರ ಮಹತ್ವ ಪರಿಸರ ಅಧ್ಯಯನಕಾರರಿಗೆ, ವಿದೇಶಿಯರಿಗೆ ಅರಿವಿದೆ. ಅನೇಕ ಅಧ್ಯಯನಗಳೂ ನಡೆದಿವೆ. ವಿಪರ್ಯಾಸವೆಂದರೆ ನಮ್ಮ ಬದುಕನ್ನು ಹಸನಾಗಿ ರೂಪಿಸಿದ, ರೂಪಿಸುವ ಇಂತಹ ಕಾನುಗಳ ಬಗ್ಗೆ ಅರಿಯದೆ ನಾಶ ಪಡಿಸಿರುವ ಪರಿಣಾಮ ಮುಂದಿನ ಜನಾಂಗ ವಿಪರೀತ ಬೆಲೆ ತೆತ್ತಬೇಕಾಗಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇರುವುದನ್ನಾದರೂ ಉಳಿಸುವ ಇಚ್ಛೆ ಸ್ವಪ್ರೇರಣೆಯಿಂದ ಆದಲ್ಲಿ ಒಂದಿಷ್ಟಾದರೂ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂರಕ್ಷಣೆಯ ಜವಾಬ್ಧಾರಿ ನಮದೆಲ್ಲರದು ಎಂಬ ಸಂಕಲ್ಪ ಎಲ್ಲರದ್ದಾಗಲಿ ಎಂದು ಆಶಿಸಿದರು.
ಕಾಲೇಜು ವಿದ್ಯಾರ್ಥಿಗಳು ಇಲ್ಲಿಯವರೆಗೆ ನಡೆದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಸಕಾರಾತ್ಮಕ ಅಂಶಗಳನ್ನು ಹಂಚಿಕೊಂಡರು.
ಕಾಲೇಜು ಪ್ರಾಚಾರ್ಯ ಪ್ರೊ.ಚಂದ್ರಕುಮಾರ್, ವಿಭಾಗಾಧಿಕಾರಿ ವೆಂಕಟೇಶ್ ನಾಯಕ್, ಅಟೋಮೊಬೈಲ್ ವಿಭಾಗದ ಅಜ್ಮಲ್ ಎಸ್.ಎ, ಗಣಕಯಂತ್ರ ವಿಭಾಗದ ಲೋಹಿತ್ ಬಣಕಾರ್, ಎಲೆಕ್ಟ್ರಾನಿಕ್ಸ್ ವಿಭಾಗದ, ಶೇಖರಪ್ಪಾ ಜಿ. ರೆಜಿಸ್ಟ್ರಾರ್. ಉಮೇಶ್ ಡಿ. ಕೆ. ಉಪನ್ಯಾಸಕರು, ಗಣಕಯಂತ್ರ ವಿಭಾಗಾಧಿಕಾರಿ, ಸಂಯೋಜಕಿ ಮಮತಾ ಸಿ. ಹಾಗೂ ಪ್ರಥಮ ವರ್ಷದ ವಿವಿಧ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post