No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ದಕ್ಷಿಣ ಕನ್ನಡ

20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ

ಮಂಗಳೂರು | ಯತಿಕಾರ್ಪ್ ಇಂಡಿಯಾದಿಂದ AI ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ

kalpa News by kalpa News
July 22, 2025
in ದಕ್ಷಿಣ ಕನ್ನಡ
0
20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, #YaticorpIndia ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದೆ. ಇದೀಗ. ಈ ಕಾರ್ಡ್ ಅನ್ನು ಒಳಗೊಂಡ #AI ಸಾಕ್ಷರತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ. ಇದರ ಭಾಗವಾಗಿ, ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ ರೂ. 20,000 ಮೌಲ್ಯದ AI ಶಿಕ್ಷಣ ಕಿಟ್‌ಗಳನ್ನು ವಿತರಿಸುವ ವಿಶೇಷ ಪೈಲಟ್ ಯೋಜನೆಯನ್ನು ಯತಿಕಾರ್ಪ್‌ ಆರಂಭಿಸಿದೆ ಎಂದು ಯತಿಕಾರ್ಪ್ ಸಂಸ್ಥೆಯ ಎಂಡಿ ಕೆ.ಎಸ್. ಯತೀಶ್ ಹೇಳಿದರು.

ಈ ಕುರಿತಂತೆ ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ, ಪ್ರತಿ ತಾಲೂಕಿನಲ್ಲಿ 10 ಯುವ ಉದ್ಯೋಗಾಕಾಂಕ್ಷಿಗಳು, 5 ಪ್ರಗತಿಪರ ಕೃಷಿಕರು, 15 ಉತ್ಸಾಹಿ ವಿದ್ಯಾರ್ಥಿಗಳು, 5 ಪೊಲೀಸ್ ಅಧಿಕಾರಿಗಳು ಹಾಗೂ 5 ಪತ್ರಕರ್ತರು ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗುವುದು. ಹೀಗೆ, ರಾಜ್ಯದಾದ್ಯಂತ ಒಟ್ಟು 10,000 ಫಲಾನುಭವಿಗಳಿಗೆ AI ಶಿಕ್ಷಣ ಕಿಟ್‌ಗಳನ್ನು ಉಚಿತವಾಗಿ ವಿತರಿಸಿ, ಕೃತಕ ಬುದ್ಧಿಮತ್ತೆಯನ್ನು ಅವರವರ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಲು ತರಬೇತಿ ನೀಡಲಾಗುವುದು. ಈ ಮೂಲಕ ಒಟ್ಟು 20 ಕೋಟಿ ರೂ. ಮೌಲ್ಯದ AI ಶಿಕ್ಷಣವನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ಈ ಕಾರ್ಯಕ್ರಮದ ಮೂಲಕ ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ವಿವಿಧ ಕ್ಷೇತ್ರದ 10 ಸಾವಿರ AI ತಂತ್ರಜ್ಞರನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಸಮಾಜದಲ್ಲಿ AI ಬಗೆಗಿನ ತಪ್ಪುಕಲ್ಪನೆಗಳು ದೂರವಾಗಿ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರಲು ಸಹಾಯವಾಗಲಿದೆ ಎಂದರು.
ವಿಶೇಷ ಆಯ್ಕೆ ಪ್ರಕ್ರಿಯೆ
ಪ್ರತಿ ತಾಲೂಕಿನಲ್ಲಿ 40 ಸೂಕ್ತ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡುವುದು ಸಂಸ್ಥೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ರೋಟರಿ, ಲಯನ್ಸ್, ಜೆಸಿಐ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಓ) ಮೂಲಕ ಆಯ್ಕೆ ಮಾಡಲಾಗುತ್ತದೆ. ಎನ್‌ಜಿಓಗಳು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ, ಯತಿಕಾರ್ಪ್ ಸಂಸ್ಥೆಯು ಉಚಿತ AI ಶಿಕ್ಷಣ ಕಿಟ್‌ಗಳನ್ನು ಈ ಸ್ಥಳೀಯ ಸಂಸ್ಥೆಗಳಿಗೆ ಪೂರೈಸಲಿದೆ. ಸ್ಥಳೀಯ ಸಂಸ್ಥೆಗಳು ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿ ಫಲಾನುಭವಿಗಳಿಗೆ ಕಿಟ್‌ಗಳನ್ನು ಹಸ್ತಾಂತರಿಸುವಾಗ, ಯತಿಕಾರ್ಪ್‌ನ ಸಂಪನ್ಮೂಲ ವ್ಯಕ್ತಿಗಳು ಕಿಟ್‌ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.

ಏನಿದರ ಉದ್ದೇಶ?
ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಅತ್ಯಂತ ಅಗತ್ಯವಾಗಿದೆ. AI ಮಾನವ ಸಮಾಜಕ್ಕೆ ವರದಾನವಾಗುವ ಸಾಮರ್ಥ್ಯದ ಜೊತೆಗೆ ಶಾಪವಾಗಬಲ್ಲ ಅಪಾಯವನ್ನೂ ಹೊಂದಿದೆ. ಈ ತಂತ್ರಜ್ಞಾನವು ನಿರುದ್ಯೋಗ, ಆರ್ಥಿಕ ಅಸಮಾನತೆ, ಖಾಸಗಿತನದ ಉಲ್ಲಂಘನೆ, ತಪ್ಪು ಮಾಹಿತಿ ಹರಡುವಿಕೆ, ದಾರಿ ತಪ್ಪಿಸುವಿಕೆ ಮತ್ತು ಸ್ವಾಯತ್ತ ಶಸ್ತ್ರಾಸ್ತ್ರಗಳಂತಹ ಗಂಭೀರ ಅಪಾಯಗಳನ್ನು ತಂದೊಡ್ಡಬಹುದು ಎಂದರು.ಮಾನವನ ಅಸ್ತಿತ್ವಕ್ಕೆ ಸವಾಲಾಗಬಲ್ಲ ಈ ತಂತ್ರಜ್ಞಾನವನ್ನು, ನೈತಿಕ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮಾನವಕುಲದ ಉಳಿವಿಗಾಗಿ AI ಮೇಲೆ ನಿಯಂತ್ರಣ ಸಾಧಿಸುವುದು ಅನಿವಾರ್ಯ. ಒಂದು ವೇಳೆ AI ಬಳಕೆಯು ಮಾನವನ ನೈತಿಕ ಚೌಕಟ್ಟಿನಿಂದ ಹೊರಗುಳಿದರೆ ಅಥವಾ ಕೆಲವೇ ವ್ಯಕ್ತಿ/ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕೃತವಾದರೆ, ಅದು ಸಮಾಜದಲ್ಲಿ ಭೀಕರ ಅನಾಹುತಗಳಿಗೆ ಕಾರಣವಾಗಬಹುದು ಎಂದರು.

AI ಬಗೆಗಿನ ತಪ್ಪು ಕಲ್ಪನೆಗಳನ್ನು ದೂರಮಾಡಿ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸುವುದು ಇಂದಿನ ಯುಗದ ಅನಿವಾರ್ಯತೆ. ಹಾಗಾಗಿ, ‘ಎಲ್ಲರಿಗೂ AI ಕಲಿಕೆ ಸಾಧ್ಯ’ ಎಂಬುದನ್ನು ಸಾಬೀತುಪಡಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮೇಲೆ ತಿಳಿಸಿದ ಎಲ್ಲಾ ಗಂಭೀರ ಚಿಂತನೆಗಳನ್ನು ಮನಗಂಡು, ‘AI ಈಗ ಆಯ್ಕೆಯಲ್ಲ, ಅವಶ್ಯಕತೆ’ ಎಂಬ ಧೈಯ ವಾಕ್ಯದೊಂದಿಗೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕದಲ್ಲಿ AI ಸಾಕ್ಷರತಾ ಯೋಜನೆಯನ್ನು ಆರಂಭಿಸಿದೆ ಎಂದರು.AI ಕಿಟ್‌ನಲ್ಲಿ ಏನಿದೆ?
ಯತಿಕಾರ್ಪ್‌ ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ಫಲಾನುಭವಿಗಳಿಗೆ ನೀಡಲಾಗುವ 20,000 ರೂ. ಮೌಲ್ಯದ AI ಶಿಕ್ಷಣ ಕಿಟ್‌ ಅತ್ಯಾಧುನಿಕ ಸಂಪನ್ಮೂಲಗಳನ್ನು ಒಳಗೊಂಡಿದೆ. AI ಶಿಕ್ಷಣದ ಜೊತೆಗೆ ಇಪ್ಪತ್ತಕ್ಕಿಂತಲೂ ಅಧಿಕ AI ಟೂಲ್’ಗಳನ್ನು ಬಳಕೆಯನ್ನು ತರಬೇತಿ ನೀಡುವುದಲ್ಲದೆ ಈ ಕೆಳಗಿನವು ಸೇರಿವೆ:

  • AI ಆಕ್ಸೆಸ್ ಕಾರ್ಡ್
  • ಪ್ರಿಂಟೆಡ್ ಹ್ಯಾಂಡ್ ಬುಕ್
  • ಡಿಜಿಟಲ್ ಆಕ್ಸೆಸ್ ಮೆಟೀರಿಯಲ್
  • AI ಬುಕ್ ವರ್ಕ್
  • ನೋಟ್ ಪ್ಯಾಡ್
  • ಮಾಸ್ಕಾಟ್ ಬ್ಯಾಡ್ಜ್
  • ವೆಲ್’ಕಮ್ ಲೆಟರ್
  • ಸರ್ಟಿಫಿಕೇಟ್ ಆಫ್ ಎನ್’ರೋಲ್’ಮೆಂಟ್
  • ಲರ್ನಿಂಗ್ ಟ್ರ್ಯಾಕರ್

ವಿಶ್ವದ ಮೊದಲ AI ಕಾರ್ಡ್
ಯತಿಕಾರ್ಪ್ ಸಂಸ್ಥೆಯ ಸಂಶೋಧನಾ ವಿಭಾಗವು 2022ರಿಂದಲೇ AI ಕಾರ್ಡ್‌ಗೆ ಸಂಬಂಧಿಸಿದಂತೆ ನಿರಂತರ ಸಂಶೋಧನೆ ನಡೆಸಿ ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಿ ಯಶಸ್ಸುಕಂಡಿದೆ. ಅಮೆರಿಕಾದ ಪ್ರಖ್ಯಾತ AI ವಿಜ್ಞಾನಿ ಪ್ರೊ. ಎಸ್.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳ ಒಂದು ಲಕ್ಷಕ್ಕೂ ಅಧಿಕ ಬಳಕೆದಾರರನ್ನು ತಲುಪಿದೆ. ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಪತ್ರಕರ್ತರು ಸೇರಿದಂತೆ 32 ವಿವಿಧ ಕ್ಷೇತ್ರದ ವೃತ್ತಿಪರರು ಈ ಕಾರ್ಡ್‌ನಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಕೈಜೋಡಿಸಿ, ಮಾಹಿತಿ ತಲುಪಿಸಿ
ಈ ಮಹತ್ವದ ಯೋಜನೆ ಯಶಸ್ವಿಗೊಳಿಸಲು ಸಮಾಜದ ಎಲ್ಲಸ್ತರಗಳ ಬೆಂಬಲ ಅನಿವಾರ್ಯ. ಸೋಷಿಯಲ್ಮೀಡಿಯಾ ಪ್ರಭಾವಿಗಳು, ಸಾರ್ವಜನಿಕ ವ್ಯಕ್ತಿಗಳು, ಚಿತ್ರರಂಗದ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಯತಿಕಾರ್ಪ್ ಸಂಸ್ಥೆಯು ಮನವಿ ಮಾಡುತ್ತದೆ. ಈ ಸುದ್ದಿಯನ್ನು ನಿಮ್ಮ ವೇದಿಕೆಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ. ಅರ್ಹಫಲಾನುಭವಿಗಳಿಗೆ ಈ ಉಚಿತ AI ಶಿಕ್ಷಣದ ಅವಕಾಶವನ್ನು ತಲುಪಿಸಲು ಸಹಾಯ ಮಾಡಿ. ನಿಮ್ಮ ಸಹಕಾರವು ಕರ್ನಾಟಕದಲ್ಲಿ AI ಸಾಕ್ಷರತಾ ಕ್ರಾಂತಿಗೆ ನಿರ್ಣಾಯಕ ಕೊಡುಗೆ ನೀಡಲಿದೆ ಎಂದರು.

ಈ ಮಹತ್ವಾಕಾಂಕ್ಷೆಯ AI ಸಾಕ್ಷರತಾ ಯೋಜನೆಯ ಮೂಲಕ, ಯತಿಕಾರ್ವ್ಸಂಸ್ಥೆಯು 10.000 ಫಲಾನುಭವಿಗಳಿಗೆ AI ಸಾಕ್ಷರತೆಯನ್ನು ಮಾತ್ರವಲ್ಲದೆ, ಸಮಗ್ರ ತಾಂತ್ರಿಕ ಪ್ರಗತಿಗೆ ಒತ್ತು ನೀಡಿದೆ. AI ಕಾರ್ಡ್‌ಗಳ ಅಭಿವೃದ್ಧಿ ಮತ್ತು ವಿತರಣೆಯು ಈಗಾಗಲೇ 1,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದು, ರಾಜ್ಯದಲ್ಲಿ ಹೊಸ ವ್ಯಾಪಾರ ಅವಕಾಶಗಳಿಗೂ ರಹದಾರಿ ಮಾಡಿಕೊಟ್ಟಿದೆ. ಶಿಕ್ಷಣ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ, ಕರ್ನಾಟಕದಲ್ಲಿ AI ಕ್ರಾಂತಿಗೆ ನಾಂದಿಹಾಡುವ ಮೂಲಕ, ಯತಿಕಾರ್ಪ್ ಸಂಸ್ಥೆಯು ಭವಿಷ್ಯದ ಬಾಗಿಲು ತೆರೆಯುತ್ತಿದೆ ಎಂದರು.

ಸುದ್ದಿಗೋಷ್ಥಿಯಲ್ಲಿ, ಕಂಪೆನಿಯ ಜನರಲ್ ಮ್ಯಾನೇಜರ್ ಕೆ. ಕೃಪಾ, ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ನವ್ಯ ಅಮೈ, ಎಚ್ ಆರ್ ಮ್ಯಾನೇಜರ್ ಭೂಮಿಕಾ ಪೂಜಾರಿ, ಸಾಫ್ಟ್ ವೇರ್ ಡೆವಲಪರ್ ಸಿ. ಶ್ರೀನಿಧಿ, ಸಿ.ಸಿ. ಕಿರಣ್, ಎಸ್ ಎಂ ಅಸೋಸಿಯೇಟ್ ರೆತಿಕ್ ಹಾಗೂ ಜಿತೇಶ್ ಶೆಟ್ಟಿ ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: AIArtificial Intelligencecoastal newsDakshina KannadaKaravali newsMangaloreYaticorp Indiaಕೃತಕ ಬುದ್ಧಿಮತ್ತೆತಂತ್ರಜ್ಞಾನಪೈಲಟ್ ಯೋಜನೆಮಂಗಳೂರುಯತಿಕಾರ್ಪ್ ಇಂಡಿಯಾ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೊರಬ | ಕುಬಟೂರಿನಲ್ಲಿ ನರಸಿಂಹಸ್ವಾಮಿ ಪೌರಾಣಿಕ ವಿಗ್ರಹ ಭಗ್ನಕ್ಕೆ ಖಂಡನೆ | ಮಾನಸಿಕ ಅಸ್ವಸ್ಥನಿಂದ ಕೃತ್ಯ?

Next Post

ಕುವೆಂಪು ವಿವಿ ಪ್ರವೇಶಾತಿಯ ಅವಧಿ ವಿಸ್ತರಣೆ | ಎಷ್ಟು ದಿನಗಳ ಕಾಲ?

kalpa News

kalpa News

Next Post
ಸೆ.26ರಿಂದ ಭದ್ರಾವತಿ ಆಕಾಶವಾಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಉಪನ್ಯಾಸಗಳ ಮಾಲಿಕೆ

ಕುವೆಂಪು ವಿವಿ ಪ್ರವೇಶಾತಿಯ ಅವಧಿ ವಿಸ್ತರಣೆ | ಎಷ್ಟು ದಿನಗಳ ಕಾಲ?

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL