ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೇ ಮೊದಲ ಬಾರಿಗೆ ಶಿವಮೊಗ್ಗದಿಂದ ಮುಂಬೈಗೆ ಏರ್‌ಲಿಫ್ಟ್ #Air Lift ಮಾಡಲಾಗಿದೆ.
ಶಿವಮೊಗ್ಗದ ಗಾಂಧಿ ಬಜಾರ್‌ನ ತಿಮ್ಮಪ್ಪ ಕೊಪ್ಪಲು ಗ್ರಾಮದ ನಿವಾಸಿ ಹಾಗೂ ಮನೋಜ್ ಮನಿಷಾ ದಂಪತಿಯ ಪುತ್ರಿಯಾಗಿರುವ ಮಾನ್ಯ (21) ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಇವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಯುವತಿಯನ್ನು ಮುಂಬೈಗೆ ರವಾನಿಸಲಾಯಿತು.
ಮೆದುಳು ಜ್ವರವೆಂದು ಬಳಲುತ್ತಿದ್ದ ಯುವತಿಗೆ ಲಿವರ್ ಫೇಲ್ಯೂರ್ ಆಗುವ ಸಾಧ್ಯತೆಯಿದ್ದು, ಲಿವರ್ ಟ್ರಾಸ್ಪಲೆಂಟ್ ಆಗಬೇಕಿದೆ ಎಂಬ ಅಂಶದಲ್ಲಿ ಮುಂಬೈನ ರಿಲಿಯನ್ಸ್ ಗೆ ಏರ್ ಶಿಫ್ಟ್ ಮಾಡಲಾಗಿದೆ. ಬಹು ಅಂಗಾಂಗ ವಿಫಲವಾಗುವ ಸಾಧ್ಯತೆಯೂ ಇತ್ತು ಎಂದು ವೈದ್ಯ ಡಾ.ರಾಕೇಶ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post