ಕಲ್ಪ ಮೀಡಿಯಾ ಹೌಸ್ | ಮೈಸೂರು |
ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಹುಬ್ಬಳ್ಳಿ ವಿಭಾಗದಿಂದ ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ನೆಡೆದ ಶ್ರೀಮತ್ ಭಾಗವತ ಸಮ್ಮೇಳನದಲ್ಲಿ ಮೈಸೂರಿನಿಂದ ಭಾಗವಹಿಸಿದ ಎಂಟು ವರ್ಷದ ಬಾಲಕ ಡಾ. ಪೃಥು ಪಿ ಅದ್ವೈತ್ ಸಭೆಯಲ್ಲಿ ವಿವಿಧ ಮಂತ್ರಗಳನ್ನು ಪಠಿಸಿ ಪ್ರಶಂಸೆಯನ್ನು ಪಡೆದರು,
ಡಾ. ಪೃಥು ಪಿ ಅದ್ವೈತ್ ಈಗಾಗಲೇ ಸ್ತೂತ್ರ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದನ್ನು ಗುರುತಿಸಿ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ವಿದ್ಯಾವಾಚಸ್ಪತಿ ಡಾ ಅರಳು ಮಲ್ಲಿಗೆ ಪಾರ್ಥಸಾರಥಿ ರವರು ಡಾ. ಪೃಥು ಪಿ ಅದ್ವೈತ್ ಗೆ “ವಾಮನ ಪ್ರಿಯ” ಎಂಬ ಬಿರುದು ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೃಥುವಿನ ಪೋಷಕರಾದ ಪುನೀತ್ ಜಿ, ಪೂಜಾ ಎನ್, ಡಾ. ಸತ್ಯ ಮೂರ್ತಿ ಆಚಾರ್ಯ, ಅಚ್ಯುತ ಭಟ್, ದ.ಕ. ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಐ.ಪಿ. ಐತಾಳ್, ಬೆಂಗಳೂರಿನ ಭಾನುಪ್ರಕಾಶ್ ಶರ್ಮ, ಮಂಗಳಾ ಭಾಸ್ಕರ್, ಮೈಸೂರಿನ ಡಾ. ರಮಾಕಾಂತ್ ಶೆಣೈ, ಸುಮತಿ ಸುಬ್ರಹ್ಮಣ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post