ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಶಾಂತ, ಸೌಮ್ಯ ಮತ್ತು ಸರಳತೆ ಇದ್ದವರು ಉತ್ತಮ ವ್ಯಕ್ತಿಗಳು, ಈ ನಡೆ ಮತ್ತು ಮೃದು ನುಡಿಗಳು ನಾಟಕಕ್ಕಾಗಿ ಮಾಡುವವರು ಸಿಗುವುದಿಲ್ಲ. ಯಾಕೆ ಅಂದರೆ ಮನುಷ್ಯನ ಸ್ವಭಾವ ಅವನ ನಡೆಯಲ್ಲಿ ಪ್ರತಿಬಿಂಬಿತವಾಗುತ್ತದೆ.
ಸಮಾಧಾನಚಿತ್ತ ಇರುವವರು ಸಿಟ್ಟಿಗೆ ಬರಬಹುದು. ಸಿಟ್ಟಿರುವವರೂ ಶಾಂತರಾಗ ಬಹುದು ಆದರೆ ಮನುಷ್ಯನ ನಿಜವಾದ ಗುಣ ಯಾವಾಗಲೂ ಜಾಗೃತವಾಗಿದ್ದು ಅವನ ನಡೆ ನುಡಿ ಹಾವ ಭಾವ ಪರಿಚಯ ಮಾಡಿಸುತ್ತದೆ.
ಉತ್ತಮ ಶಾಂತ ಸೌಮ್ಯ ಗುಣಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















