No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Tuesday, May 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಲಾರಸಿಕರನ್ನು ರಂಜಿಸಿದ ಸಂಗೀತ – ನೃತ್ಯ ಸಂಭ್ರಮ | ಕಲಾ ದಿಗ್ಗಜರ ಸಮಾಗಮ

ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಕಛೇರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 10, 2025
in Special Articles, ಬೆಂಗಳೂರು ನಗರ
0
ಕಲಾರಸಿಕರನ್ನು ರಂಜಿಸಿದ ಸಂಗೀತ – ನೃತ್ಯ ಸಂಭ್ರಮ | ಕಲಾ ದಿಗ್ಗಜರ ಸಮಾಗಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ಉಡುಪ ಸಂಗೀತ ‘ಸಂಭ್ರಮ’ ಹಬ್ಬ ಮುದ ನೀಡಿತು.

ರಾಜಧಾನಿಯ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಿನಪೂರ್ಣ ಸಂಗೀತ – ನೃತ್ಯ ಸಮಾರಾಧನೆ ಅದಮ್ಯ ಆನಂದವನ್ನು ನೀಡುವಲ್ಲಿ ಪಾರಮ್ಯ ಮೆರೆಯಿತು.

ರಾಜ್ಯದ 24 ಅತ್ಯುತ್ತಮ ಯುವ ಕಲಾವಿದರ ತಂಡವು ವಿಶೇಷ ತಾಳವಾದ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಮೂಲಕ ಬೆಳಗಿನ ಮೊದಲ ಅವಧಿಯ ಸಂಭ್ರಮಕ್ಕೆ ಮುನ್ನುಡಿ ಬರೆಯಿತು. ಪ್ರಖ್ಯಾತ ವಿದ್ವಾಂಸರಾದ ಸೋಮಶೇಖರ್ ಜೋಯಿಸ್, ಅನಿರುದ್ಧ ಭಟ್, ಅದಮ್ಯ ರಮಾನಂದ ಅವರ ನೇತೃತ್ವದಲ್ಲಿ ವಿವಿಧ ವಾದ್ಯಗಳ ಮೇಳವು ಕಲಾ ರಸಿಕರ ಮನದಲ್ಲಿ ಅನುರಣಿಸಿದವು. ನಂತರ ಮೇರು ಕಲಾವಿದ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಹಾಡುಗಾರಿಕೆ (ಕರ್ನಾಟಕ ಶಾಸ್ತ್ರೀಯ ಸಂಗೀತ) ಮನೋಜ್ಞವಾಗಿತ್ತು.
ಪಿಟೀಲಿನಲ್ಲಿ ವಿದುಷಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿದ್ವಾನ್ ಎಚ್. ಎಸ್. ಸುಧೀಂದ್ರ, ಘಟಂನಲ್ಲಿ ವಿದ್ವಾನ್ ಓಂಕಾರ್ ಹಾಗೂ ಮೋರ್ಸಿಂಗ್‌ನಲ್ಲಿ ವಿದ್ವಾನ್ ಎಸ್. ವಿ. ಗಿರಿಧರ ಅವರ ಪಕ್ಕವಾದ್ಯ ಸಹಕಾರವು ನೆರೆದಿದ್ದ ಸಂಗೀತಾಸಕ್ತರನ್ನು ಕಲಾ ಲೋಕದಲ್ಲಿ ಮಿಂದೇಳಿಸಿತು. ವಿದ್ವಾನ್‌ಪದ್ಮನಾಭ ಅವರು ತಮ್ಮ ವಿಶೇಷವಾದ ಪಲ್ಲವಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಯುಕ್ತಿ ಉಡುಪರಿಂದ ನಾಟ್ಯ ರಂಜನೆ: ಸಂಜೆ 5ಕ್ಕೆ ಭಾರತದ ಪಾರಂಪರಿಕ ಹೆಗ್ಗಳಿಕೆಗಳಲ್ಲಿ ಒಂದಾದಂತಹ ಭರತನಾಟ್ಯವನ್ನು ಪ್ರೇಕ್ಷಕರಿಗಾಗಿ ಉಣಬಡಿಸಲಾಯಿತು. ಕುಂದಾಪುರ ಮೂಲದ ಯುವ ಪ್ರತಿಭೆ ಯುಕ್ತಿ ಉಡುಪ ಅವರು ತಮ್ಮ ಪ್ರತಿಭೆ ಹಾಗೂ ಬದ್ಧತೆಯು ಕಲಿಕೆಯನ್ನು ಪಡಮೂಡಿಸಿದರು. ಕ್ರಿಯಾಶೀಲ ನರ್ತಕಿ ನೀಡುವ ಪ್ರಸ್ತುತಿ ಹೇಗಿರಬೇಕು ಎಂಬುದಕ್ಕೆ ಅವರ ಕಾರ್ಯಕ್ರಮ ಮಾದರಿಯಾಗಿತ್ತು.ವಿದ್ವತ್ ಪೂರ್ಣ ಅಭಿನಯ: ರಾಮಕಥಾ, ದ್ವಾರಂ ಮುಂತಾದ ವಿಭಿನ್ನ, ವಿಶೇಷ ಪ್ರಸ್ತುತಿಗಳಿಂದ ಕಲಾ ಕೋವಿದರ ಮನದಂಗಳದಲ್ಲಿ ಮನೆ ಮಾಡಿದ ವಿಶ್ವ ವಿಖ್ಯಾತ ಕಲಾವಿದ ವಿದ್ವಾನ್ ಸತ್ಯನಾರಾಯಣ ರಾಜು ಅವರು ತಮ್ಮ ವಿದ್ವತ್ ಪೂರ್ಣ ನೃತ್ಯ ಅಭಿನಯ ತೋರಿ ತುಂಬಿದ ಸಭೆಯನ್ನು ಮಂತ್ರಮುಗ್ಧ ಗೊಳಿಸಿದರು. ಚಪ್ಪಾಳೆ ಸುರಿಮಳೆ ಮತ್ತು ಪ್ರಶಂಸೆಗಳು ಅವರ ಪ್ರೌಢಿಮೆಗೆ ಸಾಕ್ಷಿಯಾಗಿದ್ದವು.

ನಂತರ ಗುರುವಾಯೂರು ಮೂಲದ ವಿದುಷಿ ಮೀರಾ ನಾರಾಯಣ್ ಅವರ ಭರತನಾಟ್ಯದ ಉತ್ಕೃಷ್ಠ ಪ್ರದರ್ಶನ ಪ್ರೇಕ್ಷಕರ ಮನದಂಗಳದಲ್ಲಿ ಭಾವೋತ್ಕರ್ಷ ಮೂಡಿಸಿತು. ಸಂಗೀತ- ನೃತ್ಯ ಹಬ್ಬಕ್ಕೆ ಇವರು ಮಾಡಿದ ಮಂಗಳ ಬಹುಕಾಲ ಕಲಾಭಿಮಾನಿಗಳ ಹೃದಯದಲ್ಲಿ ಮನೆಮಾಡುವಂತಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BENGALURUCarnatic musicKannada News WebsiteLatest News KannadaMusic ConcertUdupa Pratishtanaಉಡುಪ ಪ್ರತಿಷ್ಠಾನಕರ್ನಾಟಕ ಶಾಸ್ತ್ರೀಯ ಸಂಗೀತಜೆಎಸ್‌ಎಸ್ ಸಭಾಂಗಣನೃತ್ಯಬೆಂಗಳೂರುವಾದ್ಯಸಂಗೀತಹಾಡುಗಾರಿಕೆ
Share197Tweet123Send
Previous Post

ಮದ್ದೂರು ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ | ಅಧಿಕಾರಿಗಳೊಂದಿಗೆ ವಿಜಯೇಂದ್ರ ಚರ್ಚೆ

Next Post

ಅಪ್ರಾಪ್ತ ಗರ್ಭಧಾರಣೆ ಪ್ರಕರಣಗಳ ಏರಿಕೆ | ತಕ್ಷಣದ ಕ್ರಮಕ್ಕೆ ಡಿ.ಎಸ್. ಅರುಣ್ ಆಗ್ರಹ 

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮಘಟ್ಟಕ್ಕೆ ಮಾರಕ: ಶಾಸಕ ಡಿ.ಎಸ್. ಅರುಣ್

ಅಪ್ರಾಪ್ತ ಗರ್ಭಧಾರಣೆ ಪ್ರಕರಣಗಳ ಏರಿಕೆ | ತಕ್ಷಣದ ಕ್ರಮಕ್ಕೆ ಡಿ.ಎಸ್. ಅರುಣ್ ಆಗ್ರಹ 

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಶಿವಮೊಗ್ಗ-ಚೆನ್ನೈ, ಬೆಂಗಳೂರು-ಕನ್ಯಾಕುಮಾರಿ ಸೇರಿ 12 ಎಕ್ಸ್’ಪ್ರೆಸ್ ರೈಲು ಮಹತ್ವದ ಮಾಹಿತಿ

May 11, 2026
ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

May 11, 2026
`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

May 11, 2026
ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

May 11, 2026
ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

May 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL