ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುಸಂಖ್ಯಾತ ಹಿಂದೂಗಳ ಆಚರಣೆಗಳ ಮೇಲೆ ದಾಳಿ ನಡೆಸುತ್ತಿರುವ ಮತಾಂಧರ ವಿರುದ್ಧ ಕಠಿಣಕ್ರಮ ಕೈಗೊಳ್ಳಲು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾಗಿದೆ. ಹಿಂದೂಗಳು ಹಬ್ಬ, ಹರಿದಿನ, ಮೆರವಣಿಗೆಗಳನ್ನು ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ಸರ್ಕಾರ ಬಂದತ್ತಿದೆ. ಮದ್ದೂರಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶ ಮೆರವಣಿಗೆಯಲ್ಲಿ ಮುಸ್ಲಿಂರು ಕಲ್ಲು ಎಸೆದರು. ಭದ್ರಾವತಿಯ ಈದ್ ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಶತ್ರುದೇಶವಾದ ಪಾಕಿಸ್ತಾನದ ಪರವಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ರಾಷ್ಟ್ರಭಕ್ತರ ಬಳಗ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಂಗಮೇಶ್ವರ್ ಮುಸ್ಲಿಂ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬನ್ನಿ
ಮದ್ದೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಮತಾಂಧರು ಮಹಿಳಾ ಪೊಲೀಸ್ ಪೇದೆ ಮೇಲೂ ದಾಳಿ ಮಾಡಿದ್ದಾರೆ. ಅದನ್ನು ಅವರೇ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಇದು ಪೂರ್ವ ನಿಯೋಜಿತ ವ್ಯವಸ್ಥಿತ ಸಂಚು ಎಂದು ಅಲ್ಲಿನ ಅಧಿಕಾರಿಗಳು ದೃಢೀಕರಿಸಿದ್ದಾರೆ. ಮೊದಲೇ 27 ಜನರ ಬಂಧಿಸಿದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ. ಈಗ ಬಂಧಿಸಿ 500ಕ್ಕೂ ಹೆಚ್ಚು ಹಿಂದೂ ಪ್ರತಿಭಟನಾಕಾರರ ಮೇಲೆ ಎಫ್‍ಐಆರ್ ಹಾಕಿದ್ದಾರೆ. ಸಾಗರದಲ್ಲಿ ಗಣಪತಿ ಮೇಲೆ ಉಗಿದಿದ್ದಾರೆ. ನಂತರ ಕ್ಷಮೆ ಕೇಳಿದ್ದಾರೆ ಭದ್ರಾವತಿಯಲ್ಲಿ ಮುಸ್ಲಿಂ ಗೂಂಡಾಗಳು ಪಾಕಿಸ್ತಾನ್ ಜಿಂದಾಬಾದ್ ಎಂದರೂ ಇನ್ನೂ ಕ್ರಮವಾಗಿಲ್ಲ. ಭದ್ರಾವತಿ ಶಾಸಕರು ನಾನು ಇನ್ನೊಂದು ಜನ್ಮದಲ್ಲಿ ಮುಸಲ್ಮಾನ್‍ನಾಗಿ ಹುಟ್ಟುತ್ತೇನೆ ಎಂದಿದ್ದಾರೆ. ನಾನು ಸಂಗಮ್‍ವುಲ್ಲಾ ಖಾನ್ ಅವರಿಗೆ ಸವಾಲು ಹಾಕುತ್ತೇನೆ. ನೀವು ಮುಸ್ಲಿಂ ಧರ್ಮಕ್ಕೆ ಸೇರಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬನ್ನಿ ಆಗ ನಾನು ರಾಜಕಾರಣಕ್ಕೆ ರಾಜೀನಾಮೆ ನೀಡುತ್ತೇನೆ.
ಭದ್ರಾವತಿ ಶಾಸಕರು ಮುಸ್ಲಿಂರಾಗುವುದಾದರೆ ಇದೇ ಶುಕ್ರವಾರ ಅವರಿಗೆ ಮುಂಜಿಮಾಡಿಸಿ, ಮತಾಂತರ ಮಾಡುತ್ತೇವೆ. ಆದರೆ ಭದ್ರಾವತಿಯ ಹಿಂದೂಗಳು ಇದನ್ನು ಒಪ್ಪುವುದಿಲ್ಲ. ಸಂಗಮೇಶ್ ಅವರು ಕೇವಲ ಮುಸ್ಲಿಂ ಮತಗಳಿಂದ ಗೆದ್ದಿಲ್ಲ ಎಂಬುದನ್ನು ಅರಿತು ಹೇಳಿಕೆಯನ್ನು ವಾಪಾಸ್ಸು ತೆಗೆದುಕೊಳ್ಳಿ.
-ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ
ಹಿಂದೂಗಳಿಗೆ ಹಿಂದಿನಿಂದ ಚೂರಿ ಹಾಕುವವರಿದ್ದಾರೆ. ಮುಸ್ಲಿಂರಿಗೆ ಏಟು ಬಿದ್ದರೆ ತಕ್ಷಣ ಹೋಗಿ ಪರಿಹಾರ ನೀಡುತ್ತೀರಿ. ಕೇವಲ ಮುಸ್ಲಿಂರ ಮಾತ್ರ ನಿಮಗೆ ಓಟು ಹಾಕಿಲ್ಲ, ಎಲ್ಲಾ ಸಮಾಜದವರೂ ಹಾಕಿದ್ದಾರೆ. ಯಾವೊಬ್ಬ ಹಿಂದೂಗೂ ಅನ್ಯಾಯ ಮಾಡದ ರೀತಿಯಲ್ಲಿ ಸರ್ಕಾರ ನಡೆಸಿ. ಗಣೇಶ ಉತ್ಸವ, ಹನುಮ ಜಯಂತಿ ಮುಂತಾದ ಆಚರಣೆಗಳನ್ನು ಮಾಡುವುದೇ ಅಪರಾಧವೇ. ಹಿಂದೂಗಳ ಆಚರಣೆಯ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದು ಎಂದು ಇದೆಯಾ ? ಮಸೀದಿಯೊಳಗೆ ಕಲ್ಲುಗಳನ್ನು, ಮಾರಕಾಸ್ತ್ರಗಳನ್ನು, ಬಾಂಬುಗಳನ್ನು ಇಟ್ಟಿರಬಹುದಲ್ಲವೇ ? ಅದನ್ನು ತಪಾಸಣೆ ಸಭೆ ಮಾಡಿ ಎಂದು ಆಗ್ರಹಿಸಿದರು.
ಸಿಎಂ ಮತ್ತು ಡಿಸಿಎಂ ಯಾವುದೇ ಘಟನೆ ನಡೆದರೂ ಇದೊಂದು ಸಣ್ಣ ಘಟನೆ ಎಂದು ಬಿಂಬಿಸುತ್ತಾರೆ. ಪ್ರತಿಭಟಿಸಿದ ಹಿಂದೂಗಳ ಮೇಲೆಯೇ ಪೊಲೀಸರು ಲಾಠಿಪ್ರಹಾರ ಮಾಡುತ್ತಾರೆ. ಕೆಲವು ಮುಸ್ಲಿಂ ಗೂಂಡಾಗಳು ಮತ್ತೆ ಮತ್ತೆ ರಾಜ್ಯದಲ್ಲಿ ಗಲಭೆ, ದೊಂಬಿ, ಶತ್ರು ದೇಶದ ಪರ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಕೂಡಲೇ ರಾಜ್ಯ ಸರ್ಕಾರ ಘಟನೆಗೆ ಕಾರಣರಾದ ಮುಸ್ಲಿಂ ಗೂಂಡಾಗಳನ್ನು ಬಂಧಿಸಬೇಕು. ಹಿಂದೂ ಹಬ್ಬಗಳ ಮೆರವಣಿಗೆಗಳಲ್ಲಿ ಮತಾಂಧರಿಂದ ಯಾವುದೇ ತೊಂದರೆಯಾಗದಂತೆ ಕಠಿಣಕ್ರಮ ಕೈಗೊಳ್ಳಬೇಕು, ರಾಜ್ಯ ಸರ್ಕಾರ ಇದೇ ರೀತಿ ಮುಂದುವರಿದರೆ ಹಿಂದೂಗಳು ತಿರುಗಿಬೀಳುತ್ತಾರೆ ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಕೂಡಲೇ ಸರ್ಕಾರ ತನ್ನ ನಿಲುವನ್ನು ಬದಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್, ಈ. ವಿಶ್ವಾಸ್, ಜಾದವ್, ರಮೇಶ್‍ಕುಮಾರ್ ಜಾದವ್, ಮಹೇಶ್‍ಕುಮಾರ್, ಶ್ರೀಕಾಂತ್, ಕುಬೇರಪ್ಪ, ಮೋಹನ್, ಅನಿತಾ, ವೆಂಕಟೇಶ್, ಮೂರ್ತಿ, ಮಂಜುನಾಥ್, ಸೀತಾಲಕ್ಷ್ಮೀ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post