ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆಯಲ್ಲಿ #Police Department ಸಂಚಾರಿ ಇ- ಚಲನ್’ನಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸದೇ ಇರುವವರಿಗೆ ಇದೊಂದು ಸುವರ್ಣಾವಕಾಶ.
ಹೌದು… ಸಂಚಾರಿ ಇ-ಚಲನ್’ನಲ್ಲಿ #Traffic E-Chalan ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50ರಷ್ಟು ರಿಯಾಯ್ತಿಯನ್ನು ನೀಡಿದ್ದು, ನಾಳೆ (12-09-2025) ದಂಡ ಕಟ್ಟಲು ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರು ಶೇ.50ರಷ್ಟು ರಿಯಾಯಿತಿಯನ್ನು ಪಡೆದು, ದಂಡ ಪಾವತಿಸಬಹುದಾಗಿದೆ.
ಶಿವಮೊಗ್ಗ ನಗರ ಸಂಚಾರಿ ಪೊಲೀಸರು ಆ.23ರಿಂದ ಸೆ.10ರ ವರೆಗೆ ಒಟ್ಟು 31,255 ಇ-ಚಲನ್ ಪ್ರಕರಣಗಳಲ್ಲಿ ಒಟ್ಟು 1,28,56,500 ರೂ.ಗಳನ್ನು ದಂಡದ ಮೊತ್ತವಾಗಿ ಸ್ವೀಕರಿಸಿರುತ್ತಾರೆ. ಸಾರ್ವಜನಿಕರು ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿವಮೊಗ್ಗ ನಗರ ಸಂಚಾರಿ ಪೊಲೀಸ್ ವತಿಯಿಂದ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















