ಕಲ್ಪ ಮೀಡಿಯಾ ಹೌಸ್ | ಮಿಜೋರಾಂ |
ಬಹು ನಿರೀಕ್ಷಿತ, ಈಶಾನ್ಯ ರಾಜ್ಯಗಳ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸಾಕ್ಷಿಯಾಗಿದ್ದು, ಮಹತ್ವದ ಸೈರಾಂಗ್ – ಬೈರಾಬಿ ನೂತನ ರೈಲು ಮಾರ್ಗವನ್ನು ಇಂದು ಅವರು ಲೋಕಾರ್ಪಣೆ ಮಾಡಿದ್ದಾರೆ.
ಐಜ್ವಾಲ್’ಗೆ ಭೇಟಿ ನೀಡಿದ ಪ್ರಧಾನಿವರು ಸೈರಾಂಗ್ – ಬೈರಾಬಿ ನಡುವಿನ 51.83 ಕಿಲೋ ಮೀಟರ್ ದೂರದ ನೂತನ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಉದ್ಘಾಟಿಸುವ ಜೊತೆಯಲ್ಲಿ, ಮೂರು ಎಕ್ಸ್’ಪ್ರೆಸ್ ರೈಲುಗಳಿಗೂ ಸಹ ಹಸಿರು ನಿಶಾನೆ ತೋರಿಸಿದರು.
ಹವಾಮಾನ ವೈಪರೀತ್ಯದಿಂದ ಐಜ್ವಾಲ್ ತಲುಪಲು ಸಾಧ್ಯವಾಗದ ಪ್ರಧಾನಿಯವರು ಮಣಿಪುರದ ಪೊಲೀಸ್ ಹೆಡ್ ಕ್ವಾಟ್ರಸ್’ನಲ್ಲಿ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಐಜ್ವಾಲ್’ನ ಲಮ್ಮುವಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ವರ್ಚುವಲ್ ಮೂಲಕವೇ ಪ್ರಧಾನಿಯವರು ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಿದರು. ಇದೇ ವೇದಿಕೆ ಮೂಲಕ ಮಿಜೋರಾಂನ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿ, ಐಜ್ವಾಲ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್’ಪ್ರೆಸ್’ಗೆ ಚಾಲನೆ ನೀಡಿದರು.
ಯಾವೆಲ್ಲಾ ರೈಲುಗಳಿಗೆ ಚಾಲನೆ?
ಸೈರಾಂಗ್ – ಬೈರಾಬಿ ನಡುವಿನ ನೂತನ ರೈಲು ಮಾರ್ಗಕ್ಕೆ ಚಾಲನೆ ನೀಡುವ ಜೊತೆಯಲ್ಲಿ ಪ್ರಧಾನಿಯವರು ಮೂರು ನೂತನ ರೈಲುಗಳಿಗೂ ಸಹ ಹಸಿರು ನಿಶಾನೆ ತೋರಿಸಿದ್ದಾರೆ.
1. ಐಜ್ವಾಲ್ (ಸೈರಾಂಗ್) ಮತ್ತು ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ರಾಜಧಾನಿ ಎಕ್ಸ್’ಪ್ರೆಸ್ ರೈಲು
2. ಐಜ್ವಾಲ್ (ಸೈರಾಂಗ್) ಮತ್ತು ಗುವಾಹಟಿ ಎಕ್ಸ್’ಪ್ರೆಸ್ ರೈಲು
3. ಐಜ್ವಾಲ್ (ಸೈರಾಂಗ್) ಮತ್ತು ಕೋಲ್ಕತ್ತಾ ಎಕ್ಸ್’ಪ್ರೆಸ್ ರೈಲು

ಇನ್ನು, ತಮ್ಮ ಮಿಜೋರಾಂನ ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿಯವರು 9,000 ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮಿಜೋರಾಂನಲ್ಲಿ 8,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಬೈರಾಬಿ-ಸೈರಾಂಗ್ ರೈಲು ಮಾರ್ಗವು ಐಜ್ವಾಲ್ ಅನ್ನು ಮೊದಲ ಬಾರಿಗೆ ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಿಸುತ್ತದೆ.
ಮಣಿಪುರ ಮತ್ತು ಅಸ್ಸಾಂನಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ.

ರೈಲ್ವೆ ಸಚಿವಾಲಯವು 2014 ರಿಂದ ಈಶಾನ್ಯಕ್ಕೆ 62,477 ಕೋಟಿಗಳನ್ನು ನಿಗದಿಪಡಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 10,440 ಕೋಟಿಗಳನ್ನು ಮೀಸಲಿಟ್ಟಿದೆ.
ಜುಲೈ, 2025 ರ ಹೊತ್ತಿಗೆ ಈಶಾನ್ಯ ಪ್ರದೇಶದಲ್ಲಿ 16,207 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ.
ಪಿಎಂಜಿಎಸ್’ವೈ ಅಡಿಯಲ್ಲಿ, 80,933 ಕಿ.ಮೀ.ಗಳನ್ನು ಒಳಗೊಂಡ 16,469 ರಸ್ತೆ ಕಾಮಗಾರಿಗಳು ಮತ್ತು 2,108 ಸೇತುವೆಗಳು ಪೂರ್ಣಗೊಂಡಿವೆ.
ರೈಲ್ವೆ ಸಚಿವಾಲಯವು ಈಶಾನ್ಯ ಪ್ರದೇಶದಲ್ಲಿ ಬೃಹತ್ ಪರಿವರ್ತನೆಗೆ ಮುಂಚೂಣಿಯಲ್ಲಿದೆ. ದಾಖಲೆಯ ಹೂಡಿಕೆಗಳೊಂದಿಗೆ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವುದು ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಮಿಜೋರಾಂ ಕಾರ್ಯಕ್ರಮದ ನಂತರ ಪ್ರಧಾನಿಯವರು ಮಧ್ಯಾಹ್ನ 12:30 ಕ್ಕೆ ಮಣಿಪುರದ ಚುರಚಂದಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಪೀಸ್ ಗ್ರೌಂಡ್’ನಲ್ಲಿ ಇದೇ ರೀತಿಯ ಸಮಾರಂಭ ನಡೆಯಲಿದೆ.
ನಂತರ ಪ್ರಧಾನಿಯವರು ಕಾಂಗ್ಲಾ ಮೈದಾನದಲ್ಲಿ ಹೆಚ್ಚುವರಿ ಯೋಜನೆಗಳ ಉದ್ಘಾಟನೆಗಾಗಿ ಮಣಿಪುರದ ಇಂಫಾಲ್’ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿಯವರು ಅಸ್ಸಾಂನ ಗುವಾಹಟಿಯಲ್ಲಿ ತಮ್ಮ ಭೇಟಿಯನ್ನು ಪೌರಾಣಿಕ ಕಲಾವಿದ ಮತ್ತು ಭಾರತ ರತ್ನ ಪುರಸ್ಕೃತ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯನ್ನು ಆಚರಿಸುವ ವಿಶೇಷ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post