ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
‘ಆಚಾರ್ಯ ದೇವೋಭವ’ ಎನ್ನುವುದು ನಮ್ಮ ಸಂಸ್ಕೃತಿಯಾಗಿದೆ. ಸಾಮಾಜಿಕ ಬದಲಾವಣೆಯ ಹರಿಕಾರ ಹಾಗೂ ಸುಂದರ ಸಮಾಜದ ನಮ್ರ ಸೇವಕನೆಂದರೆ ‘ಶಿಕ್ಷಕ’ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ, ಡಾ.ಎಂ. ವೀರೇಂದ್ರ ಹೇಳಿದರು.
ಸೋಮವಾರ ಪಟ್ಟಣದ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಡಾ. ಸರ್ವೆಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಭಾರತ ದೇಶದಲ್ಲಿ ವಿಶೇಷವಾಗಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜನ್ಮ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಿಸಲಾಗುತ್ತಿದೆ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬದಲಾವಣೆಗೆ ಗುರು ಪ್ರರಣೆಯಾಗಿದ್ದಾನೆ ನಿಸ್ವಾರ್ಥ ಸೇವೆ ಎಂದರೆ ಶಿಕ್ಷಕ ವೃತ್ತಿಯಾಗಿದೆ. ಏಕೆಂದರೆ ಶಿಕ್ಷಕರ ವೃತ್ತಿ ಪವಿತ್ರವಾದದ್ದು ತನ್ನ ವೃತ್ತಿಯನ್ನು ಗೌರವಿಸುತ್ತಾ ನಿರಂತರ ಕಲಿಕೆಯಲ್ಲಿ ಕ್ರಿಯಾಶೀಲನಾಗಿ ಆದರ್ಶ ವ್ಯಕ್ತಿತ್ವ ಬೆಳೆಸಿಕೊಂಡು ಮಕ್ಕಳಿಗೆ ಸ್ನೇಹಿತನಾಗಿ, ನಾಯಕನಾಗಿ, ಪಾಲಕನಾಗಿ, ಮೇಲ್ವಿಚಾರಕನಾಗುವುದರ ಜೊತೆಗೆ ಪುಸ್ತಕದಿಂದ ಪುಸ್ತಕಕ್ಕೆ ಬೋಧಿಸದೆ ಹೃದಯದಿಂದ.. ಹೃದಯಕ್ಕೆ ಭಾವನೆಯಿಂದ.. ಭಾವನೆಗೆ, ಯೋಚನೆಯಿಂದ.. ಯೋಚನೆಯನ್ನು ಬೆಳೆಸುವ ಶಿಕ್ಷಕರಾಗಬೇಕೆಂದು ತಿಳಿಸಿದರು.
ಮತ್ತೋರ್ವ ಅಥಿತಿಗಳಾದ ಪರ್ವೇಜ್ ಅಹಮ್ಮದ್ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಶಿಸ್ತು ಬದ್ಧವಾಗಿ ನಡೆದುಕೊಳ್ಳುವುದೇ ನೀವು ನಮಗೆ ಕೊಡುವ ಗೌರವ ಅಂತಹ ಮಕ್ಕಳನ್ನು ಸೃಷಿಸುವುದು ಗುರುವಿನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಾದ ಮೆಹನಾಜ್ ಖುರೇಶಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಸೇರಿ ಶಿಕ್ಷಕರಿಗೆ ಕಿರು ಕಾಣಿಕೆ ಜೊತೆಗೆ ವಿವಿಧ ಆಟೋಟಗಳಲ್ಲಿ ತೊಡಗಿಸಿ ಶಿಕ್ಷಕರನ್ನು ಸಂತಸಗೊಳಿಸಿದರು.
ಸಂಜನಾ ಹಾಗೂ ಸಂಗಡಿಗರು ಪ್ರಾರ್ಥಿಸಿ, ಲಕ್ಷ್ಮೀ ಸ್ವಾಗತಿಸಿದರು. ಅಜ್ಜಯ ಸಂಗಡಿಗರು ಶಿಕ್ಷಕರ ಪರಿಚಯ ಮಾಡಿಕೊಟ್ಟರು. ಗಣೇಶ ವಂದಿಸಿ, ವರ್ಷಾ ಮತ್ತು ಪ್ರತೀತ ನಿರೂಪಿಸಿದರು.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಾಚಾರ್ಯ,ಡಾ.ಎಂ.ವೀರೇಂದ್ರ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪರ್ವಿಜ್ ಅಹ್ಮದ್ ಹಾಗೂ ಚಂದ್ರಶೇಖರ್, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















