ಕಲ್ಪ ಮೀಡಿಯಾ ಹೌಸ್ | ಸಾಣೂರು(ಉಡುಪಿ) |
ಇಲ್ಲಿನ ಸಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಶೌಚಾಲಯದ ಉದ್ಘಾಟನೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಂಟಿ ಅನುದಾನದಿಂದ ಗ್ರಾಮ ಪಂಚಾಯತ್ ಸಾಣೂರು ಇವರು ನಿರ್ಮಿಸಿ ಕೊಟ್ಟಿರುವ ಬಾಲಕಿಯರ ಶೌಚಾಲಯವನ್ನು ಸಾಣೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಿದರು.
ಡಾ. ಮೋಹನದಾಸ್ ಜಿ ಪ್ರಭು ರವರು ವಿದ್ಯಾ ಸಂಸ್ಥೆಯು ಸಾಕಷ್ಟು ಪ್ರಗತಿಯನ್ನು ಕಾಣುವಲ್ಲಿ ಪ್ರಾಂಶುಪಾಲರ ಹಾಗೂ ಉಪನ್ಯಾಸ್ಕಾರ ಶ್ರಮದ ಜೊತೆಗೆ ಊರವರ, ದಾನಿಗಳ ನೆರವನ್ನು ಸ್ಮರಿಸಿದರು.
ಪೂರ್ವ ವಿದ್ಯಾರ್ಥಿಯಾಗಿದ್ದ ಭಾರತ ಪೆಟ್ರೋಲಿಯಂನ ವಿಶ್ರಾಂತ ಉದ್ಯೋಗಿ ಶ್ರೀ ರವಿದಾಸ್ ಭಟ್ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತಗಳನ್ನಾಡಿದರು.
ಡಾ. ಮೋಹನ್ ದಾಸ್ ಜಿ ಪ್ರಭು ರವರ ಮುಂದಾಳತ್ವದಲ್ಲಿ ಬಿ.ಎಸ್. ಹೆಗಡೆಯವರು ವಾಟರ್ ಕೂಲರ್ ನೀಡಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಸಾಣೂರು ಗ್ರಾಮ ಪಂಚಾಯ್ತಿಯ ಸದಸ್ಯರಾದ ಪ್ರಸಾದ್ ಪೂಜಾರಿ ಮಾತನಾಡಿ, ವಿದ್ಯಾ ಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಸಹಕರಿಸುವುದಾಗಿ ಹೇಳಿದರು.
ಶೌಚಾಲಯದ ಕಾಂಟ್ರಾಕ್ಟರ್ ವಿಶ್ವನಾಥ ಶೆಟ್ಟಿ ಅವರನ್ನು ದಂಪತಿ ಸಮೇತ ಅಭಿನಂದಿಸಲಾಯಿತು. ವಿವಿಧ ಸಂಘ ಸಂಸ್ಥೆಗಳು ನಡೆಸಿದ ಬೇರೆ ಬೇರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕಲಿಯುವಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಡಾ.ಸುಮತಿ ಪಿ ಯವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಟೆಲ್ಮಾ ರೀಟಾ ರಸ್ಕಿನ್ಹಾ ಹಾಗೂ ಎನ್.ಜಿ. ಗೌರಿ ಅವರು ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು. ಜಗದೀಶ್ ನಾಯಕ್ ಧನ್ಯವಾದ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸುಚೇತಾ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ, ಸಾಣೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಯಶೋಧಾ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುಲ್ ಲತೀಫ್ ಹಾಗೂ ಅಣ್ಣಿಮೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಲವೀನ ಮೇಲ್ವಿಟ, ಹಾಗೂ ಎಸ್’ಡಿಎಂಸಿ ಅಧ್ಯಕ್ಷರಾದ ಮಾಧವ ಭಂಡಾರ್ಕರ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post