ಕಲ್ಪ ಮೀಡಿಯಾ ಹೌಸ್ | ಬೀದರ್ |
ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರಿಗೆ ದೇವರು ಉತ್ತಮ ಆರೋಗ್ಯ ಕೊಡಲಿ ಎಂದು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಹಾಗೂ ಪಕ್ಷದ ಆದೇಶದಂತೆ ಸೇವಾ ಪಾಕ್ಷಿಕ ಅಂಗವಾಗಿ ವಿವಿಧ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬೀದರ್ ದಕ್ಷಿಣ ಕ್ಷೇತ್ರದ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಅಂಗವಾಗಿ ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ ಹಾಗೂ ಮಹಾತ್ಮರ ವೃತ್ತದಲ್ಲಿ ಸ್ವಚ್ಛತೆ ಕಾರ್ಯ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ನರೇಂದ್ರ ದಾಮೋದರ್ ದಾಸ್ ಮೋದಿ’’ ಹೀಗೆ ಹೇಳುತ್ತಾ ಮೇ ೨೬, ೨೦೧೪ರಂದು ನರೇಂದ್ರ ಮೋದಿ ಭಾರತದ ೧೪ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಹೆಸರು ಇಡೀ ಪ್ರಪಂಚದಾದ್ಯAತ ಪ್ರತಿಧ್ವನಿಸಲು ಪ್ರಾರಂಭಿಸಿತು. ವಿಶ್ವದ ಅತ್ಯಂತ ಪ್ರಸಿದ್ಧ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪ್ರಧಾನಿ ಮೋದಿ ಅವರ ೭೫ ನೇ ಹುಟ್ಟುಹಬ್ಬವನ್ನು ಆಚರಿಸಲು ಪಕ್ಷದ ಆದೇಶದಂತೆ ಸೇವಾ ಪಾಕ್ಷಿಕ ಕಾರ್ಯಾಗಾರ ನಡೆಸಲಾಗುತ್ತಿದೆ.

ಪ್ರಧಾನಿ ಮೋದಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಧೈರ್ಯದಿಂದ ಮುನ್ನಡೆಸಿದ್ದಾರೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ, ಜನಪ್ರಿಯತೆ ಮತ್ತು ಅವರ ವ್ಯಕ್ತಿತ್ವದ ಅದ್ಭುತ ಪ್ರಭಾವವು ಅವರನ್ನು ಕಠಿಣ ನಿರ್ಧಾರಗಳನ್ನು ಸಹ ಸುಲಭವಾಗಿ ಕಾರ್ಯಗತಗೊಳಿಸಲು ಸಮರ್ಥರಾದ ದೃಢನಿಶ್ಚಯದ ನಾಯಕರನ್ನಾಗಿ ಮಾಡಿದೆ. ನರೇಂದ್ರ ಮೋದಿಯವರ ಶ್ರೇಷ್ಠ ವ್ಯಕ್ತಿತ್ವವು ಅವರ ನಾಯಕತ್ವ ಸಾಮರ್ಥ್ಯ, ದೂರದೃಷ್ಟಿ ಮತ್ತು ಸಾರ್ವಜನಿಕ ಬೆಂಬಲದ ಪರಿಣಾಮವಾಗಿದೆ. ಅವರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ ಮತ್ತು ಜಯಿಸಿದ್ದಾರೆ, ಇದು ಅವರ ಬಲವಾದ ಇಚ್ಛಾಶಕ್ತಿ ಮತ್ತು ದೃಢಸಂಕಲ್ಪವನ್ನು ತೋರುತ್ತದೆ.

ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳಿ ಗ್ರಾಮದಲ್ಲಿನ ಬಾಲಾಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಹಣ್ಣು ವಿತರಣೆ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ವಿಶ್ವಗುರು ಬಸವೇಶ್ವರರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದಲ್ಲಿ ಸ್ವಚ್ಛತೆ ಮಾಡಿ ಪುಸ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post