ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಬಹಳಷ್ಟು ಜನರಿಗೆ ಹಲವರ ಅಥವಾ ಯಾರ ಏಳಿಗೆಯು ಆನಂದವನ್ನು ಕೊಡುವುದಿಲ್ಲ ಹೊಟ್ಟೆ ಉರಿಗೆ ಕಾರಣವಾಗಿರುತ್ತದೆ. ಮತ್ತೊಬ್ಬರ ಉನ್ನತಿ ಮತ್ತು ಏಳಿಗೆಗೆ ಸಂತಸ ಪಡುವುದು ಸಹೃದಯತೆ.
ನಮ್ಮ ಏಳಿಗೆಯಲ್ಲಿ ಮತ್ತೊಬ್ಬರು ಸಂತಸ ಪಡಬೇಕು ಎಂಬ ಭಾವನೆ ನಮಗೆ ಇದ್ದರೇ ನಮ್ಮ ಸುತ್ತ ಮುತ್ತಲಿನ ಜನರ ಸಂಬಂಧಿಕರ, ಸ್ನೇಹಿತರ ಯಶಸ್ಸಿಗೆ ಮುಕ್ತ ಮನಸ್ಸಿನಿಂದ ಹರಸಿ ಪ್ರೋತ್ಸಾಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಹೊಟ್ಟೆ ಉರಿ ಅಸೂಯೆ ಇವುಗಳು ಬಹಳ ಸುಲಭವಾಗಿ ಕಾಣುವ ಗುಣಗಳು ಆದ್ದರಿಂದ ಮತ್ತೊಬ್ಬರ ಯಶಸ್ಸು, ಉನ್ನತಿ, ಏಳಿಗೆಯನ್ನು ನೋಡಿ ಸಂತಸ ಪಟ್ಟು ಸಂಭ್ರಮಿಸುವವಾರಗೋಣ.
ಪ್ರಪಂಚದಲ್ಲಿ ಎಲ್ಲರಲ್ಲೂ ಒಂದು ಗುಣ ಇದ್ದೇ ಇರುತ್ತದೆ. ನಮ್ಮದೇ ಶ್ರೇಷ್ಠ ಎಂದು ಎಲ್ಲೆಡೆ ಆವರಿಸಿ ನಮ್ಮ ಹಿರಿಮೆ ಹೇಳಿ ಕೊಳ್ಳುವ ಅಹಂಕಾರಿಗಳಾಗದೆ ಇನ್ನೊಬ್ಬರನ್ನು ಶ್ಲಾಘಿಸುವ ಗೌರವ ನೀಡುವ ಉತ್ತಮ ಗುಣ ಬೆಳೆಸಿಕೊಳ್ಳೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post