ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಮುಖ ಬೆಳವಣಿಗೆಯೊಂದರಲ್ಲಿ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ದೇಶದ ವಿವಿಧ ಕಡೆಗಳಿಂದ ಅಪರೂಪದ ಪ್ರಾಣಿಗಳು ಬರಲಿವೆ.
ಈ ಕುರಿತಂತೆ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದು, ಸೆ. 25ರಿಂದ ಅ.2ರವರೆಗೂ ಈ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.
ಎಲ್ಲೆಲ್ಲಿಂದ ಪ್ರಾಣಿಗಳ ವಿನಿಮಯ?
ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದವರಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ, ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟ ಮತ್ತು ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕಿದೆ.
ಯಾವೆಲ್ಲಾ ಪ್ರಾಣಿಗಳ ವಿನಿಮಯ?
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟಕ್ಕೆ ಕರಡಿ -2, ಸಿಂಹ -2 ಹಾಗೂ ನರಿ -2 ಕಳುಹಿಸುತ್ತಿದೆ. ಅಲ್ಲಿಂದ ಹುಲಿ -2, ಬಿಳಿ ಹುಲಿ -1 ತರಿಸಲಾಗುತ್ತಿದೆ.
ಹಾಗೆಯೇ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್’ಗೆ ಕಾಡುಕೋಣ -4, ಆಸ್ಟಿಥಚ್ – 4 ಕಳುಹಿಸಲಾಗುತ್ತಿದ್ದು, ಅಲ್ಲಿಂದ ಸಿಂಹ -2, ಹುಲಿ-1 ತರಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post