ಕಲ್ಪ ಮೀಡಿಯಾ ಹೌಸ್ | ಸಿದ್ದಾಪುರ |
ಕಳ್ಳತನ ಮತ್ತು ದನ ಸಾಗಾಣಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ಕೆಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ವ್ಯಕ್ತಿಯನ್ನು ಉಡುಪಿಯಲ್ಲಿ ದಸ್ತಗಿರಿ ಮಾಡಿ ಸಿದ್ದಾಪುರ ಜೆ.ಎಂ.ಎಫ್‌ಸಿ ನ್ಯಾಯಾಲಯದ ಮುಂದೆ ಸಿದ್ದಾಪುರ ಪೊಲೀಸರು ಹಾಜರುಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಪ್ರಕರಣದ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಳ್ಳೂರಕೇರಿಯ ಜಿಯಾವುಲ್ಲಾ ಭೋಗಿ ಭಾಷಾ ಸಾಬ (30) ಇತನು ಕಳ್ಳತನ ಮತ್ತು ದನ ಸಾಗಾಣಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ‘ನಲ್ಲಿ ಪ್ರಕರಣಗಳಿದ್ದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ಇದೀಗ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಪತ್ತೆಯ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಕೃಷ್ಣಮೂರ್ತಿ ಜಿ ಮತ್ತು ಜಗದೀಶ ಎಂ, ಶಿರಸಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್, ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆ.ಬಿ ಸೀತಾರಾಮ, ಪಿ.ಎಸ್.ಐ ಶಾಂತಿನಾಥ ಪಾಸಾನೆ ಸಿಬ್ಬಂದಿಗಳಾದ ಚೇತನಕುಮಾರ ಹಲಗೇರಿ, ಸಂತೋಷ ನಾಯ್ಕ, ಗಿರೀಶಯ್ಯ ಎಂ.ಎಸ್ ಇವರುಗಳು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post