ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಏಕವೇಣೀ ಸಪಾಕರ್ಣಪೂರಾ ನಗ್ನಾ ಖರಾಸ್ಥಿತಾ|
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ||
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ|
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರೀ ಭಯಂಕರಿ||
ಏಳನೇ ದಿನ ಸಪ್ತಮಿಯಂದು ಪೂಜೆಗೊಳ್ಳುವ ದೇವಿ ಕಾಳರಾತ್ರಿ ಅಥವಾ ಕಾಳಿ ದುಷ್ಟರಾದ ಶುಂಭ ನಿಶುಂಭರ ಸಂಹಾರಕ್ಕೆ ಈ ಅವತಾರವನ್ನು ದೇವಿಯು ತೆಗೆದುಕೊಂಡಿರುತ್ತಾಳೆ. ಅಮಾವಾಶ್ಯೆಯಂತಹ ಕಪ್ಪಾದ ಬಣ್ಣದಿಂದಲೇ ಅವಳಿಗೆ ಕಾಳಿ ಎಂಬ ಹೆಸರು ಬಂದಿರುತ್ತದೆ. ಅವಳು ತನ್ನ ಕೂದಲನ್ನು ಹರಡಿಕೊಂಡಿರುತ್ತಾಳೆ. ಕೊರಳಲ್ಲಿ ಮಿಂಚಿನಂತಿರುವ ಮಾಲೆ ಇರುತ್ತದೆ. ಇವಳಿಗೆ ಮೂರು ಕಣ್ಣುಗಳಿದ್ದು ಮೂರು ಕಣ್ಣುಗಳೂ ಬ್ರಹ್ಮಾಂಡದಂತೆ ಗೋಲಾಕಾರವಾಗಿದೆ. ಕಣ್ಣುಗಳಲ್ಲಿ ವಿದ್ಯತ್ತಿನಂತಹ ಹೊಳಪಿದೆ. ಯಾವಾಗಲೂ ಶುಭ ಫಲವನ್ನು ಕೊಡುವವಳಾದ್ದರಿಂದ ಇವಳನ್ನು ಶುಭಂಕರೀ ಎನ್ನುತ್ತಾರೆ.
ಇವಳು ಕೂಡ ಚತುರ್ಭುಜೆಯಾಗಿದ್ದು, ಒಂದು ಕೈಲಿ ಖಡ್ಗ, ಮತ್ತೊಂದರಲ್ಲಿ ತ್ರಿಶೂಲ, ಮೂಗು ಮತ್ತು ಇನ್ನೊಂದರಲ್ಲಿ ಅಭಯ ಹಸ್ತ ಹಿಂದಿರುವ ಇವಳ ವಾಹನ ಕತ್ತೆಯಾಗಿದೆ. ಕೇಸರಿ ಬಣ್ಣವು ಇವಳ ಪ್ರೀತಿಯ ಬಣ್ಣವಾದರೂ ಕೆಂಪು ವಸ್ತ್ರ ಧರಿಸಿರುತ್ತಾಳೆ. ಬೆಲ್ಲ ಅವಳ ಪ್ರೀತಿಯ ಪದಾರ್ಥವಾಗಿದ್ದು ಬೆಲ್ಲ ಹಾಗೂ ಬೆಲ್ಲದಿಂದ ತಯಾರಿಸಿದ ಪದಾರ್ಥಗಳನ್ನು ಭಕ್ತರು ನೈವೇದ್ಯ ಮಾಡಿ ಪ್ರಸಾದ ಸೇವಿಸುತ್ತಾರೆ. ಜಾಜಿ ಮಲ್ಲಿಗೆ ಅಥವಾ ರಾತ್ರಿ ಮಲ್ಲಿಗೆ ದೇವಿಯ ಇಷ್ಟದ ಹೂವು. ದೇವಿಯನ್ನು ಪಠಿಸುವ ಮಂತ್ರ “ಓಂ ದೇವಿ ಕಾಲರಾತ್ರೈ ನಮಃ” ದೇವಿಯ ಸ್ತುತಿ””ಯಾ ದೇವಿ ಸರ್ವ ಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಸ್ತುತಿಸಬೇಕು.
ಕಾಲರಾತ್ರಿ ದೇವಿ ಪೂಜೆಯ ದಿನದಂದು ಭಕ್ತನು “ಸಹಸ್ರಾರ” ಚಕ್ರದಲ್ಲಿರುತ್ತಾನೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಯ ಬಾಗಿಲುಗಳು ತೆರೆದುಕೊಂಡಿರುತ್ತವೆ ಅವನ ಸಾಧನೆಯಿಂದ ಎಲ್ಲ ಪಾಪ ವಿಘ್ನಗಳೂ ಪರಿಹಾರವಾಗಿ ಅಕ್ಷಯ ಲೋಕದ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವಿಯ ಸ್ಮರಣೆ ಮಾತಿನಿಂದಲೇ ಭೂತ ಪ್ರೇತ ಪಿಶಾಚಗಳಷ್ಟೇ ಅಲ್ಲದೇ ದೈನ್ಯ ದಾನವರೂ ಓಡಿ ಹೋಗುತ್ತಾರೆ. ಅಗ್ನಿಭಯ, ಜಲಭಯ, ಶತ್ರುಭಯ, ರಾತ್ರಿಭಯ ಮುಂತಾದ ಭಯಗಳನ್ನು ಪರಿಹರಿಸುತ್ತಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post