ಕಲ್ಪ ಮೀಡಿಯಾ ಹೌಸ್ | ಸಿರುಗುಪ್ಪ |
ತಾಲೂಕಿನ ಮಿಟ್ಟೆಸೂಗೂರು ಗ್ರಾಮದ ಅಧಿದೇವತೆ ಶ್ರೀ ಮಾರಿಕಾಂಭೆಯ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ವಿಜಯದಶಮಿಯ #Vijayadashami ಅಂಗವಾಗಿ ವಿವಿಧ ಫಲಪುಷ್ಪ, ಆಭರಣಗಳು ಹಾಗೂ ವೀಳ್ಯದೆಲೆಗಳಿಂದ ಸಿಂಗರಿಸಿ ಮಹಾಮಂಗಳಾರತಿ ಮಾಡಲಾಯಿತು.
ಸಾಲಾಗಿ ನಿಂತು ಮಹಿಳೆಯರು ರಥದ ಹಗ್ಗವನ್ನು ಎಳೆಯುವುದರೊಂದಿಗೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ಈ ರಥೋತ್ಸವದಲ್ಲಿ ಮಹಿಳೆಯರೇ ತೇರನ್ನು ಎಳೆಯುತ್ತಿರುವುದು ಇಲ್ಲಿನ ವಿಶೇಷವಾಗಿದೆ.
ವಿದ್ಯುತ್ ದೀಪಗಳಿಂದ ಇಡೀ ಗ್ರಾಮವೇ ಅಲಂಕಾರದಿಂದ ಶರನ್ನವರಾತ್ರಿಯ ಅಂಗವಾಗಿ ಮೊದಲ ದಿನದಿಂದಲೇ ಪುರಾಣ ಪ್ರವಚನ ಆರಂಭವಾಗಿ ವಿಜಯದಶಮಿಯಂದು ಮಹಾಮಂಗಲವಾಗುತ್ತದೆ.
ಗ್ರಾಮದಲ್ಲಿ ವಿಜೃಂಭಣೆಯಿಂದ ರಥೋತ್ಸವದಲ್ಲಿ ಭಾಗವಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪರಸ್ಪರ ಬನ್ನಿ ಹಂಚಿಕೊಂಡು ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















