ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್’ಎಲ್ ಕಾರ್ಖಾನೆಯ ಸಾಂಸ್ಥಿಕ ಸಾಮಾಜಿಕ ಕಳಕಳಿಯ ಭಾಗವಾಗಿ ಅರಕೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ .0ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ಅರಕೆರೆ ಗ್ರಾಮದಲ್ಲಿ ಸಮಗ್ರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಹೃದಯಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು.
ಅಲ್ಲದೇ, ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ), 2ಡಿ ಎಕೋಕಾರ್ಡಿಯೋಗ್ರಫಿ (2ಡಿ ಎಕೋ) ಮತ್ತು ಸ್ತ್ರೀ ಸಂಬಂಧಿತ ರೋಗಗಳ ತಪಾಸಣೆಗಳನ್ನು ಮಾಡಲಾಯಿತು.
ವಿಐಎಸ್’ಎಲ್ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್. ಚಾಂದ್ವಾನಿ ಶಿಬಿರಕ್ಕೆ ಚಾಲನೆ ನೀಡಿದರು.
ವಿಐಎಸ್‌ಎಲ್ ಅಧಿಕಾರಿಗಳಾದ ಎಲ್. ಪ್ರವೀಣ್ ಕುಮಾರ್, ಶೋಭಾ ಶಿವಶಂಕರನ್, ಡಾ. ಕೆ.ಎಸ್. ಸುಜೀತ್ ಕುಮಾರ್, ಡಾ. ಎಸ್.ಎನ್. ಸುರೇಶ್, ಎಂ.ಎಲ್. ಯೋಗೀಶ್, ಅಪರ್ಣ, ಅರಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರತ್ನಮ್ಮ ರುದ್ರೇಶ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್. ಶಿವಶಂಕರಮೂರ್ತಿ, ಗ್ರಾಪಂ ಸದಸ್ಯರಾದ ಎಸ್.ಎಲ್. ರವಿಕುಮಾರ್, ಟಿ.ಎಂ. ಗುರುಮೂರ್ತಿ, ಟಿ. ಗಾಯತ್ರಿ ಶಂಕರಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಕಮಲಮ್ಮ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ. ಹರ್ಷಗೌಡ, ಡಾ. ಚಂದನ್, ಡಾ. ಬಸವರಾಜ್, ಗಣೇಶ್, ಶಂಕರ ಕಣ್ಣಿನ ಆಸ್ಪತ್ರೆಯ ಹರ್ಷ ಆರ್. ಗೌಡ. ಡಾ. ಹರ್ಷಿತ, ಭದ್ರಾವತಿ ತಾಲೂಕು ಮಾರಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಎಂ. ಮಂಜುಳ, ನಾಗರತ್ನ, ಲಲಿತ, ಮತ್ತು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀನಿವಾಸ ಉಪಸ್ಥಿತರಿದ್ದರು. 310 ಗ್ರಾಮಸ್ಥರು ಈ ಶಿಬಿರದ ಸದುಪಯೋಗಪಡಿಸಿಕೊಂಡರು.
ವಿಐಎಸ್‌ಎಲ್ ವತಿಯಿಂದ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಸೈಲ್-ವಿಐಎಸ್‌ಎಲ್’ನ ಹಸಿರೆಡೆಗೆ-ನಮ್ಮ ನಡೆ ಉಪಕ್ರಮದಡಿಯಲ್ಲಿ ನುಗ್ಗೆ ಮತ್ತು ಪಪ್ಪಾಯಿಯ ಉತ್ತಮ ತಳಿಯ 1500 ಬೀಜಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.ಸೈಲ್ ಶಭಾಷ್ ಯೋಜನೆಯಡಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ವಿಐಎಸ್’ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ವಿಐಎಸ್’ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ, ಉಪಾಧ್ಯಕ್ಷರಾದ ಶೋಭಾ ಶಿವಶಂಕರನ್, ಇಸ್ಪಾತ್ ಮಹಿಳಾ ಸಮಾಜ ಇವರುಗಳು ಜ್ಯೋತಿಯನ್ನು ಬೆಳಗಿಸಿ, ಗಾಂಧಿ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು.
ವಿಐಎಸ್‌ಎಲ್ ಉದ್ಯೋಗಿಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಪ್ರಬಂಧಕರಾದ (ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮವನ್ನು ವಿಐಎಸ್‌ಎಲ್‌ನ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಅತಿಥಿಗೃಹ ಆಯೋಜಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post