ಕಲ್ಪ ಮೀಡಿಯಾ ಹೌಸ್ | ಬದರಿನಾಥ |
ಉತ್ತರಾಖಂಡದ ಬದರಿನಾಥ ದೇವಾಲಯಕ್ಕೆ #Badarinath Temple of Uttarakhand ಖ್ಯಾತ ನಟ ರಜನಿಕಾಂತ್ #Actor Rajanikanth ಭೇಟಿ ನೀಡಿ, ದೇವರ ದರ್ಶನ ಪಡೆದರು.
ನಿನ್ನೆ ಸೋಮವಾರ ಉತ್ತರಾಖಂಡದ ದೇವಾಲಯಗಳಿಗೆ ಭೇಟಿ ನೀಡಿದ ರಜನಿಕಾಂತ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ದೇಗುಲಕ್ಕೆ ಆಗಮಿಸಿದ ರಜನಿಕಾಂತ್ ಅವರನ್ನು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆತ್ಮೀಯವಾಗಿ ಬರ ಮಾಡಿಕೊಂಡರು. ದೇವರ ದರ್ಶನ ಪಡೆದ ರಜನಿಕಾಂತ್, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ದೇವಾಲಯ ಸಮಿತಿ ವತಿಯಿಂದ ರಜನಿಕಾಂತ್ ಅವರಿಗೆ ತುಳಸಿ ಮಾಲೆ ಹಾಗೂ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನಾ ದಿನ ಋಷಿಕೇಶದ ಗಂಗಾ ನದಿಯ ದಡದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು.
ಬೆಚ್ಚಗಿನ ಉಡುಪು ಧರಿಸಿದ್ದ ರಜನಿಕಾಂತ್ ಅವರು ಯಾತ್ರಾ ಮಾರ್ಗದಲ್ಲಿ ಸಾಗುತ್ತಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಚಳಿಗಾಲದ ಹಿನ್ನೆಲೆ ದೇಗುಲದ ಬಾಗಿಲುಗಳನ್ನು ಇನ್ನು ಕೆಲ ದಿನಗಳಲ್ಲಿ ಮುಚ್ಚಲಾಗುತ್ತಿದ್ದು, ಅದಕ್ಕೂ ಮುನ್ನವೇ ರಜನಿಕಾಂತ್ ದರ್ಶನ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post